ಸಕಲೇಶಪುರ: ಮಳಲಿ ಗ್ರಾಮಪಂಚಾಯತಿಯಲ್ಲಿ ಶುಕ್ರವಾರ ಗ್ರಾ.ಪಂ ಅಧ್ಯಕ್ಷ ಸತೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು.ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲಿಂಗರಾಜು ಸ್ವಾಗತ ಮಾಡಿದರೆ,ನಂಜೇಶ್ ಮಳಲಿ ಪ್ರಾರ್ಥನೆ ಮಾಡಿದರು.ಗ್ರಾ.ಪಂ ಅಧ್ಯಕ್ಷರಾದ ಕೆ. ಆರ್. ಸತೀಶ್ ಶೆಟ್ಟಿ,ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಮನು, ಮಳಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅಣ್ಣಮ್ಮ ಜೆ.ಪ್ರಾನ್ಸಿಸ್ ,ಹಾಲೇಬೇಲೋರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಮೇಶ್ , ಕಂದಾಯ ನಿರೀಕ್ಷಕ ಸುರೇಶ್, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಇಂದಿರಾ, ಕೃಷಿ ಇಲಾಖೆ ಶರವಣ, ಅರಣ್ಯ ಇಲಾಖೆ ಅಧಿಕಾರಿ ದಿನೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾವ್ಯ ಮತ್ತು ಸಂಜಯ್, ಸಾಮಾಜಿಕ ಅರಣ್ಯ ಇಲಾಖೆಯ ಲೀಲಾ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳಾದ ರಂಗಸ್ವಾಮಿ, ಗ್ರಾಮ ಸದಸ್ಯರುಗಳಾದ ಎಂ.ಸಿ ಯೋಗೇಶ್, ಶಿವಕುಮಾರ, ಮಂಜುಳ , ಮಠಸಾಗರ ಸದಸ್ಯ ಮದನ್ ಕುಮಾರ್,ಕೋಗರವಳ್ಳಿ ಸದಸ್ಯರುಗಳಾದ ಮಹದೇವಮ್ಮ , ಷಣ್ಮುಖ, ಕಬ್ಬಿನಗದ್ದೆ ಸದಸ್ಯರಾದ ಶಶಿಕುಮಾರ್, ಹಾಲೇಬೇಲುರು ಸದಸ್ಯರಾದ ಈರಮ್ಮ, ಮೋಹನಾಕ್ಷಿ ಮತ್ತು ಪಂಚಾಯಿತಿಯ ಎಲ್ಲ ಸಿಬ್ಬಂದಿಗಳು ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸುತ್ತ ಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.