Sunday, March 16, 2025
Homeಸುದ್ದಿಗಳುಸಕಲೇಶಪುರಕಾಫಿ ಬೆಳೆಗಾರನ ಮೇಲೆ ಕಾಡಾನೆ ದಾಳಿ : ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಚ್.ಡಿ.ಪಿ.ಎ...

ಕಾಫಿ ಬೆಳೆಗಾರನ ಮೇಲೆ ಕಾಡಾನೆ ದಾಳಿ : ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಚ್.ಡಿ.ಪಿ.ಎ ಖಜಾಂಚಿ – ಚಂದ್ರಶೇಖರ್

ಸಕಲೇಶಪುರ :- ಇಂದು ಬೆಳಗ್ಗೆ ಕಾಫಿ ಬೆಳೆಗಾರನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆಗೆ ಅರಣ್ಯ ಇಲಾಖೆಯ ವೈಫಲ್ಯವೇ ಕಾರಣ ಎಂದು ಹಾಸನ ಜಿಲ್ಲಾ ಪ್ಲಾಂಟರ್ ಸಂಘದ ಖಜಾಂಚಿ ಚಂದ್ರಶೇಖರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರಂತರ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಮುಂಜಾನೆ ಸಮಯದಲ್ಲಿ ತೋಟಗಳಿಗೆ ಬೆಳೆಗಾರರು ಹಾಗೂ ಕೂಲಿಕಾರ್ಮಿಕರು ತೆರಳುವ ಮೊದಲೇ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸ ಮಾಡಬೇಕು ಜೊತೆಗೆ ಕಾಡಾನೆಗಳು ಇರುವ ಮಾಹಿತಿಯನ್ನು ಸರಿಯಾಗಿ ಒದಗಿಸಬೇಕು ಇದ್ಯಾವುದನ್ನು ಮಾಡದ ಅರಣ್ಯ ಇಲಾಖೆ ರೈತರು, ಬೆಳೆಗಾರರು, ಹಾಗೂ ಕೂಲಿ ಕಾರ್ಮಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬೆಳೆಗಾರರ ಸಂಘಟನೆಗಳ ಜೊತೆ ಮಾತುಕತೆ ನೆಡಸಿ ಕಾಡಾನೆಗಳ ಹಾವಳಿಯ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಲಾಗುವುದು ಎಂದರು.

RELATED ARTICLES
- Advertisment -spot_img

Most Popular