Thursday, January 15, 2026
Homeಸುದ್ದಿಗಳುಪಿಡಿಓ ವರ್ಗಾವಣೆಗೆ ಪಟಾಕಿ ಸಿಡಿಸಿ ಸಾರ್ವಜನಿಕರ ಸಂಭ್ರಮಾಚರಣೆ.

ಪಿಡಿಓ ವರ್ಗಾವಣೆಗೆ ಪಟಾಕಿ ಸಿಡಿಸಿ ಸಾರ್ವಜನಿಕರ ಸಂಭ್ರಮಾಚರಣೆ.

ಸಕಲೇಶಪುರ :- ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಹೆಬ್ಬಸಾಲೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಅಧಿಕಾರಿಯಾಗಿದ್ದ ವತ್ಸಲಾ ವರ್ಗಾವಣೆಯನ್ನು ಕೆಲ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಾರ್ವಜನಿಕರು ಹೆಬ್ಬಸಾಲೆ ಗ್ರಾ.ಪಂ ಮುಂಭಾಗ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.

ಇತ್ತೀಚೆಗೆ ಪಿಡಿಒ ಆಗಿದ್ದ ವತ್ಸಲಾ ರವರ ಮೇಲೆ ಕೆಲ ಗ್ರಾಮ ಪಂಚಾಯತಿ ಸದಸ್ಯರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ಸಿಇಓ ಕಾಂತರಾಜ್ ಅವರು ಪಿಡಿಓ ಅವರು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದರು

ಕೆಲ ದಿನಗಳ ಹಿಂದೆ ಬಿಜೆಪಿ ಮುಖಂಡ ಸಿಮೆಂಟ್ ಮಂಜುನಾಥ್ ಮತ್ತು ಶಾಸಕ ಪ್ರೀತಮ್ ಗೌಡ ರವರ ಭಾವಚಿತ್ರವುಳ್ಳ ಉಡುಗೊರೆಯನ್ನು ನೀಡಲು ತಮ್ಮ ಅಧಿಕಾರವನ್ನು ಬಳಸಿಕೊಂಡಿದ್ದರು ಎಂಬ ಆರೋಪವನ್ನು ಜೆಡಿಎಸ್ ಬೆಂಬಲಿತ ಸದಸ್ಯರು ಆರೋಪಿಸಿದ್ದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ವತ್ಸಲಾ ರವರ ವರ್ಗಾವಣೆ ಆದೇಶವನ್ನು ಕೆಲವರು ಖಂಡಿಸಿದ್ದರು. ಪಂಚಾಯತಿಯಲ್ಲಿ ಉತ್ತಮ ಕಾರ್ಯ ನಿರ್ವಹಣೆ ಜೊತೆಗೆ ಎಲ್ಲರೊಡನೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದರು ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.

ಏನೇ ಆಗಲಿ ಪಿಡಿಓಯೊಬ್ಬರ ವರ್ಗಾವಣೆಯನ್ನು ಈ ರೀತಿ ಸಂಭ್ರಮಾಚರಣೆ ಮಾಡಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎನಿಸಿದೆ. ಪಿಡಿಓ ವರ್ಗಾವಣೆಗೆ ಈ ರೀತಿ ಸಂಭ್ರಮಿಸಿದಕ್ಕೆ ವ್ಯಾಪಕ ವಿರೋಧ ಸಹ ವ್ಯಕ್ತವಾಗಿದೆ‌.

RELATED ARTICLES
- Advertisment -spot_img

Most Popular