Friday, April 18, 2025
Homeಕ್ರೈಮ್ಸಕಲೇಶಪುರ : ವಿದ್ಯುತ್ ಶಾಕ್ ಯುವಕನೋರ್ವನಿಗೆ ಗಂಭೀರ ಗಾಯ

ಸಕಲೇಶಪುರ : ವಿದ್ಯುತ್ ಶಾಕ್ ಯುವಕನೋರ್ವನಿಗೆ ಗಂಭೀರ ಗಾಯ

ಸಕಲೇಶಪುರ :  ಛಾವಣಿಗೆ ಶೀಟ್ ಆಳವಡಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಲೈನ್ ತಾಗಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ.
ಶಬಾಝ್ (21) ಗಂಭೀರವಾಗಿ ಗಾಯಗೊಂಡ ಯುವಕ ಎಂದು ಗುರುತಿಸಲಾಗಿದೆ. ಆತನ ಎರಡು ಕೈ, ಹೊಟ್ಟೆ ಹಾಗೂ ಸೊಂಟದ ಭಾಗ ಸುಟ್ಟು ಹೋಗಿದೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆ: ಮಾಜಿ ಪುರಸಭ ಸದಸ್ಯ ವೆಂಕಟೇಶ್ ಅವರಿಗೆ ಸೇರಿದ ಕಟ್ಟಡದ ಕೆಲಸವನ್ನು ಕಳೆದ ಕೆಲವು ದಿನಗಳಿಂದ ಮಾಡುತ್ತಿದ್ದು ಅಂತಿಮ ಹಂತದ ಕೆಲಸವನ್ನು ಮುಗಿಸಲು ಕಬ್ಬಿಣದ ಶೀಟ್ ಛಾವಣಿಯ ಮೇಲೇರಿಸುವ ಸಂದರ್ಭದಲ್ಲಿ ಲೈನ್ ಕೇಬಲ್ಗೆ ಶೀಟ್ ತಗುಲಿದೆ.   ಶಾಕ್‌ನಿಂದ ಶಬಾಝ್ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾನೆ. ತಕ್ಷಣವೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
RELATED ARTICLES
- Advertisment -spot_img

Most Popular