Tuesday, March 25, 2025
Homeವಿದೇಶಚುನಾವಣಾ ಫಲಿತಾಂಶ: ಗುಜರಾತ್​ನಲ್ಲಿ BJP ಭರ್ಜರಿ ಮುನ್ನಡೆ, ಹಿ. ಪ್ರದೇಶದಲ್ಲಿ ಕಾಂಗ್ರೆಸ್​ನಿಂದ ಟಫ್​ ಫೈಟ್​, AAPಗೆ...

ಚುನಾವಣಾ ಫಲಿತಾಂಶ: ಗುಜರಾತ್​ನಲ್ಲಿ BJP ಭರ್ಜರಿ ಮುನ್ನಡೆ, ಹಿ. ಪ್ರದೇಶದಲ್ಲಿ ಕಾಂಗ್ರೆಸ್​ನಿಂದ ಟಫ್​ ಫೈಟ್​, AAPಗೆ ನಿರಾಸೆ

 

ದೇಶದ ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದ ಗುಜರಾತ್​ ಮತ್ತು ಹಿಮಾಚಲಪ್ರದೇಶ ವಿಧಾನಸಭಾ ಚುನಾವಣೆಯ ಮತಎಣಿಕೆ ಆರಂಭವಾಗಿದೆ. ಸದ್ಯ ಟ್ರೆಂಡ್​ ಪ್ರಕಾರ ಗುಜರಾತ್​ನಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದರೆ, ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್​ ತೀವ್ರ ಪೈಪೋಟಿ ನೀಡಿದೆ.

ಬೆಳಗ್ಗೆ 8 ಗಂಟೆಗೆ ಆರಂಭವಾದ ಮತಎಣಿಕೆ ಪ್ರಕ್ರಿಯೆಯ ಆರಂಭದಲ್ಲೇ ಗುಜರಾತ್​ ಮತ್ತು ಹಿಮಾಚಲ ಪ್ರದೇಶ ಎರಡಲ್ಲೂ ಬಿಜೆಪಿ ಮುನ್ನಡೆ ಸಾಧಿಸಿತು. ಬೆಳಗ್ಗೆ 9 ಗಂಟೆಯವರೆಗೆ ನಡೆದ ಮತಎಣಿಕೆಯ ಟ್ರೆಂಡ್​ ಪ್ರಕಾರ ಗುಜರಾತ್​ನಲ್ಲಿ ಬಿಜೆಪಿ 130 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್​ 48 ಹಾಗೂ ಎಎಪಿ 3ರಲ್ಲಿ ಮುನ್ನಡೆ ಸಾಧಿಸಿದೆ. ಅಧಿಕಾರ ರಚನೆಗೆ 92 ಮ್ಯಾಜಿನ್​ ಅವಶ್ಯಕತೆ ಇದ್ದು, ಬಿಜೆಪಿ ಈಗಾಗಲೇ ಅದನ್ನು ದಾಟಿರುವುದರಿಂದ ಮತ್ತೊಮ್ಮೆ ಬಿಜೆಪಿಗೆ ವಿಜಯಲಕ್ಷ್ಮೀ ಒಲಿಯುವ ಸಾಧ್ಯತೆಗಳು ದಟ್ಟವಾಗಿದೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 34 ಸ್ಥಾನಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್​ 33 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಆಡಳಿತಾರೂಢ ಬಿಜೆಪಿಗೆ ಕಠಿಣ ಪೈಪೋಟಿಯನ್ನು ನೀಡುತ್ತಿದೆ. ಆದರೆ, ಎಎಪಿ ಮಾತ್ರ ಯಾವುದೇ ಖಾತೆಯನ್ನು ತೆರೆದಿಲ್ಲ.

ಡಿ.1 ಮತ್ತು 5ರಂದು ಗುಜರಾತ್​ನ 182 ವಿಧಾನಸಭಾ ಸೀಟುಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, 7ನೇ ಬಾರಿಗೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿ ಬಿಜೆಪಿಯಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಎಷ್ಟು ಸೀಟುಗಳನ್ನು ಗೆಲ್ಲಲಿದೆ ಎಂಬ ಕುತೂಹಲ ಗರಿಗೆದರಿದೆ. ಗುಜರಾತ್​ನಲ್ಲಿ ಅಧಿಕಾರ ಹಿಡಿಯಲು 92 ಸ್ಥಾನಗಳ ಬಹುಮತ ಸಾಧಿಸಬೇಕಿದೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ನವಂಬರ್​ 12ರಂದು ಒಂದು ಹಂತದಲ್ಲಿ 68 ಸ್ಥಾನಗಳಿಗೆ ಮತದಾನ ನಡೆದಿದ್ದು, ಅಧಿಕಾರ ರಚನೆಗೆ 35 ಸ್ಥಾನಗಳಲ್ಲಿ ಗೆಲ್ಲುವ ಅವಶ್ಯಕತೆ ಇದೆ

RELATED ARTICLES
- Advertisment -spot_img

Most Popular