Monday, March 24, 2025
Homeಸುದ್ದಿಗಳುಸಕಲೇಶಪುರಜಿಲ್ಲೆಯ ಜೀವನಾಡಿ ಹೇಮಾವತಿ ನದಿಗೆ ಶಾಸಕರಿಂದ ಬಾಗಿನ ಸಮರ್ಪಣೆ

ಜಿಲ್ಲೆಯ ಜೀವನಾಡಿ ಹೇಮಾವತಿ ನದಿಗೆ ಶಾಸಕರಿಂದ ಬಾಗಿನ ಸಮರ್ಪಣೆ

ಜಿಲ್ಲೆಯ ಜೀವನಾಡಿ ಹೇಮಾವತಿ ನದಿಗೆ ಶಾಸಕರಿಂದ ಬಾಗಿನ ಸಮರ್ಪಣೆ

ಸಕಲೇಶಪುರ: ಪಟ್ಟಣದಲ್ಲಿ ಹೇಮಾವತಿ ನದಿ ತುಂಬಿ ಹರಿಯುತ್ತಿರುವ ಹಿನ್ನಲೆಯಲ್ಲಿ ಶಾಸಕ ಸಿಮೆಂಟ್ ಮಂಜು ತಮ್ಮ ಧರ್ಮ ಪತ್ನಿ ಪ್ರತಿಭಾ ಮಂಜುನಾಥ್‌ರವರೊಡನೆ  ಹೊಳೆಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಬಾಗಿನ ಸಮರ್ಪಿಸಿದರು.

  ಈ ಬಾಗಿನ ಅರ್ಪಿಸಿ ಮಾತನಾಡಿದ ಶಾಸಕರು ಮಾತನಾಡಿ ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿರುವುದು ಸಂತೋಷ, ತಾಲೂಕಿನಲ್ಲಿ ಹೇಮಾವತಿ ನದಿ ಸೇರಿದಂತೆ ಅನೇಕ ನದಿಗಳಿದ್ದು ಇದರ ನೀರು ಇಲ್ಲಿನವರಿಗಿಂತ ಹೊರ ಜಿಲ್ಲೆಗಳ ಜನರಿಗೆ ಅನುಕೂಲವಾಗುತ್ತಿದೆ. ನಮ್ಮ ಭಾಗದಲ್ಲಿ ಮಳೆಯಾದರೆ ಹೊರ ತಾಲೂಕುಗಳ  ರೈತರಿಗೆ ಬಹಳ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರೈತರ ಅನುಕೂಲಕ್ಕಾಗಿ  ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ನಮ್ಮ ಕ್ಷೇತ್ರದ ಬೆಳೆಗಾರರಿಗೆ ಹಾಗೂ ಜನರಿಗೆ ತೊಂದರೆಯಾಗದಂತೆ ಮಳೆಯಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.

ಈ ಸಂಧರ್ಭದಲ್ಲಿ ತಹಶೀಲ್ದಾರ್ ಮೇಘನಾ, ತಾ.ಪಂ ಇ.ಓ ರಾಮಕೃಷ್ಣ, ಹೊಳೆ ಮಲ್ಲೇಶ್ವರ ದೇವಸ್ಥಾನ ಟ್ರಸ್‌ಟ್ ಅಧ್ಯಕ್ಷ ದೂಲ್‌ರಾಜ್, ಹಿಂದೂ ಮುಖಂಡ ರಘು ಸಕಲೇಶಪುರ, ಪುರಸಭಾ ಸದಸ್ಯರುಗಳಾದ ಪ್ರದೀಪ್, ವನಜಾಕ್ಷಿ, ರೇಖಾ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -spot_img

Most Popular