Monday, March 24, 2025
Homeಕ್ರೈಮ್ಸ್ನಾನ ಮಾಡುವಾಗ ವಿದ್ಯುತ್ ಹರಿದು ಸಾವು

ಸ್ನಾನ ಮಾಡುವಾಗ ವಿದ್ಯುತ್ ಹರಿದು ಸಾವು

ಸ್ನಾನ ಮಾಡುವಾಗ ವಿದ್ಯುತ್ ಹರಿದು ಸಾವು 

 ಸಕಲೇಶಪುರ : ತಾಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ವ್ಯಕ್ತಿಯೋರ್ವರು ಅಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ.

. ತಾಲೂಕಿನ ಮಲ್ಲಗದ್ದೆ ಮೂಲದ ನಟರಾಜ್ (54) ಮೃತಪಟ್ಟ ದುರ್ದೈವಿಯಾಗಿದ್ದು ಬ್ಯಾಕರವಳ್ಳಿ ಗ್ರಾಮದ ರೆಸಾರ್ಟ್ ಒಂದನ್ನು ನೋಡಿಕೊಳ್ಳುತ್ತಿದ್ದ ಇವರು ಸ್ನಾನ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಹರಿದು ಸಾವನ್ನಪ್ಪಿದ್ದಾರೆ. ಮಲೆನಾಡಿನಲ್ಲಿ ವ್ಯಾಪಕ ಮಳೆಯಿಂದಾಗಿ ಹಲವು ಅನಾಹುತಗಳು ಸಂಭವಿಸುತ್ತಿದ್ದು ವಿದ್ಯುತ್ ಹರಿಯುವ ಕುರಿತು ಜನ ಸಾಮಾನ್ಯರು ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕ ಸಿಮೆಂಟ್ ಮಂಜು ಮನವಿ ಮಾಡಿದ್ದಾರೆ. ಪಟ್ಟಣದ ಕ್ರಾಪರ್ಡ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯಿತು

RELATED ARTICLES
- Advertisment -spot_img

Most Popular