Friday, April 18, 2025
Homeಕ್ರೈಮ್ಕಂಟೈನರ್'ನಲ್ಲಿ ತುಂಬಿದ್ದ 26 ಗೋವುಗಳ ಸಂರಕ್ಷಣೆ: ಬಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ

ಕಂಟೈನರ್’ನಲ್ಲಿ ತುಂಬಿದ್ದ 26 ಗೋವುಗಳ ಸಂರಕ್ಷಣೆ: ಬಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ

 ಕಂಟೈನರ್ ನಲ್ಲಿ ತುಂಬಿದ್ದ 26 ಗೋವುಗಳ ಸಂರಕ್ಷಣೆ: ಬಜರಂಗದಳ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆ

ಸಕಲೇಶಪುರ – ಕೇರಳ ಹಾಗೂ ಮಂಗಳೂರು ಭಾಗಕ್ಕೆ ನಿತ್ಯ ನಿರಂತರ ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುವಂತಹ ಘಟನೆ ಭಾನುವಾರ ರಾತ್ರಿ ಸಕಲೇಶಪುರ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

             ಭಾನುವಾರ ರಾತ್ರಿ ಕಾರ್ಯಾಚರಣೆಯಲ್ಲಿದ್ದ ಬಜರಂಗದಳ ಕಾರ್ಯಕರ್ತರಿಗೆ ಹಾಸನ ಭಾಗದಿಂದ ಬೈಪಾಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವೇಗವಾಗಿ ಬಂದ ಕಂಟೈನರ್ ವಾಹನವನ್ನು ಬೆನ್ನಟ್ಟಿರುವ ಬಜರಂಗದಳ ಕಾರ್ಯಕರ್ತರು ನಗರದ ಬೈಪಾಸ್ ರಸ್ತೆ ಟೊಲ್ ಗೇಟ್ ಬಳಿ ಪೋಲಿಸರು ಸಹಯೋಗದಲ್ಲಿ KA 06 C 6919 ಕಂಟೈನರ್ ವಾಹನವನ್ನು ತಡೆದಿದ್ದಾರೆ.

            ಕಂಟೈನರ್ ಪರಿಶೀಲಿಸಲಾಗಿ ವಾಹನದೊಳಗೆ ಮೇಲ್ನೋಟಕ್ಕೆ ಎಮ್ಮೆಗಳು ಇದ್ದಂತೆ ಕಂಡರು ಪೋಲೀಸರು ಠಾಣೆಗೆ ಪರಿಶೀಲನೆ ಮಾಡಿದಾಗ ಬರೋಬ್ಬರಿ 26 ಗೋವುಗಳ ಅಮಾನುಷವಾಗಿ ತುಂಬಿರುವುದು ಕಂಡುಬಂದಿದೆ. ಹಿಂಸಾತ್ಮಕವಾಗಿದ್ದ ಗೋವುಗಳ ರಾತ್ರೋರಾತ್ರಿ ಬಜರಂಗದಳ ಕಾರ್ಯಕರ್ತರು ನೇರವಿನೊಂದಿಗೆ ಕಂಟೈನರ್ ವಾಹನದೊಳಗಿದ್ದ ಹಸುಗಳು ಕೆಳಗೆ ಇಳಿಸಿ ಸೋಮವಾರ ಬೆಳಗ್ಗೆ ಇನ್ನೊಂದು ವಾಹನ ಮಾಡಿ ಅರಸೀಕೆರೆ ಗೋಶಾಲೆಗೆ ಬಿಡಲಾಗಿದೆ‌. ಸಕಲೇಶಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -spot_img

Most Popular