ಆಲೂರು : ಮೂರು ದಿನಗಳ ಹಿಂದೆ ಕೆಲವು ಕಿಡಿಗೇಡಿಗಳು ಆಲೂರು ತಾಲ್ಲೂಕಿನ
ಕುಡಿದಲೆ ಗ್ರಾಮದ ಪ್ರವೀಣ್ ಎಂಬುವವರಿಗೆ ಸೇರಿದ ಮೂರು ಎಕರೆ
ಕಾಫಿ,ಮೆಣಸು,ಹಾಗೂ ಅಡಿಕೆ ಗಿಡಗಳನ್ನು ಕಡಿದು ನಾಶ ಪಡಿಸಿದ ಹಿನ್ನೆಲೆಯಲ್ಲಿ ಇಂದು
ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜು ಸ್ಥಳಕ್ಕೆ ಬೇಟಿ ನೀಡಿ ಪ್ರವೀಣ್
ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಿರಂತರ ನ್ಯೂಸ್ ನೊಂದಿಗೆ ಸಿಮೆಂಟ್ ಮಂಜು ಮಾತನಾಡಿ ಕುಡಿದಲೆ ಗ್ರಾಮದ ಪ್ರವೀಣ್
ಎಂಬುವವರಿಗೆ ಸೇರಿದ ಮೂರು ಎಕರೆಯಲ್ಲಿ ಬೆಳೆದಿದ್ದ ಕಾಫಿ,ಮೆಣಸು ಗಿಡಗಳನ್ನು
ಪ್ರವೀಣ್ ಗೆ ಆಗದವರು ಜೆಸಿಬಿ ಮೂಲಕ ಕಿತ್ತು ಹಾಕಿರುವುದು ಸರಿಯಲ್ಲ ಏನೇ
ಸಮಸ್ಯೆ ಇದ್ದರು ಕೂತು ಬಗೆಹರಿಸಿಕೊಳ್ಳಬಹುದಿತ್ತು ಹತ್ತರಿಂದ ಹನ್ನೆರಡು ವರ್ಷ ಲಕ್ಷಾಂತರ
ರೂ ಖರ್ಚು ಮಾಡಿ ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಈ ರೀತಿ ಮಾಡಬಾರದು ಇದು
ಎಂತಹವರಿಗೂ ದುಃಖ ತರುತ್ತೆ ಇಂತಹ ಕೆಲಸ ಯಾರು ಮಾಡಬಾರದು ಇದು
ಸೂಕ್ಶ್ಮವಾದ ವಿಚಾರ ಇದು ಹಲವು ದಿನಗಳಿಂದ ನಡೆಯುತ್ತಿರುವ ವ್ಯಾಜ್ಯವಾಗಿದ್ದು
ಸಂಭಂದಪಟ್ಟ ಅಧಿಕಾರಿಗಳು ಕೂತು ಸರಿಪಡಿಸಿ ಘಟನೆ ತಡೆಯ ಬಹುದಿತ್ತು ಈಗಲಾದರೂ
ಸಂಭಂದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕಾನೂನು ರೀತಿ ಸಮಸ್ಯೆ ಬಗೆಹರಿಸುವತ್ತಾ
ಗಮನಹರಿಸಬೇಕು ಎಂದು ಒತ್ತಾಯಿಸಿದರು.