Sunday, November 24, 2024
Homeಕ್ರೈಮ್ವಕೀಲರಿಗೆ ವಂಚಿಸಿದ್ದ ಚೆಕ್ ಬೌನ್ಸ್ ಪ್ರಕರಣದ ಆರೋಪಿಗೆ ಶಿಕ್ಷೆ

ವಕೀಲರಿಗೆ ವಂಚಿಸಿದ್ದ ಚೆಕ್ ಬೌನ್ಸ್ ಪ್ರಕರಣದ ಆರೋಪಿಗೆ ಶಿಕ್ಷೆ

ಸಕಲೇಶಪುರ: ಚೆಕ್ ಬೌನ್ಸ್ ಪ್ರಕರಣದಲ್ಲಿ ಪಟ್ಟಣದ ವಕೀಲರೋರ್ವರಿಗೆ ವಂಚಿಸಿದ್ದ ವ್ಯಕ್ತಿಯೋರ್ವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

   ಪಟ್ಟಣದ ಮಹೇಶ್ವರಿ ನಗರ ಬಡಾವಣೆಯಲ್ಲಿ ವಾಸವಾಗಿರುವ ಕಾಳು ಮೆಣಸು ವ್ಯಾಪಾರಿ ನದೀಮ್ ಪಾಷಾರವರು ತನ್ನ ವ್ಯವಹಾರ ನಿಮಿತ್ತ ವಕೀಲರಾದ ಅಕ್ರಂ ಪಾಷಾರವರ ಬಳಿ 8 ಲಕ್ಷ ಹಣವನ್ನು ಪಡೆದುಕೊಂಡಿದ್ದರು. ವ್ಯವಹಾರದ ನಿಮಿತ್ತ ಪಡೆದುಕೊಂಡ ಸಾಲವನ್ನು ಕೆಲವು ತಿಂಗಳ ಬಳಿಕ ಹಿಂತಿರುಗಿಸೋದಾಗಿ ಹೇಳಿದ್ದರು. ನಂತರ ಆ ಹಣವನ್ನು ಹಿಂದುರುಗಿಸುವ ಸಲುವಾಗಿ 8 ಲಕ್ಷ ರೂಳ ಚೆಕ್ಕನ್ನು ನೀಡಿದ್ದರು. ಚೆಕ್ ನಗದಾಗದೆ ಬೌನ್ಸ್ ಆಗಿದ್ದರಿಂದ ವಕೀಲ ಅಕ್ರಂ ಪಾಷಾರವರು ಕಾಳು ಮೆಣಸು ವ್ಯಾಪಾರಿ ನದೀಮ್ ಪಾಷಾರವರ ವಿರುದ್ದ ಸ್ಥಳೀಯ ನ್ಯಾಯಾಲಯದಲ್ಲಿ ಸಿ.ಸಿ ನಂ 632/20 ಪ್ರಕರಣವನ್ನು ದಾಖಲಿಸಿದ್ದರು. ಅಂತಿಮವಾಗಿ ವಿಚಾರಣೆ ನಡೆದು ಸಕಲೇಶಪುರ ಜೆ.ಎಂ.ಎಫ್.ಸಿ ನ್ಯಾಯಾಲಯದ ಕಿರಿಯ ವಿಭಾಗದ ನ್ಯಾಯಾಧೀಶರಾದ ಸುಧೀರ್ ರವರು 10ಲಕ್ಷ ರೂಗಳನ್ನು ಪರಿಹಾರವಾಗಿ ಹಾಗೂ 6 ತಿಂಗಳ ಸಜೆಯನ್ನು ವಿಧಿಸಿದ್ದಾರೆ. ಆರೋಪಿಯು ತಲೆಮೆರೆಸಿಕೊಂಡಿದ್ದು ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಹುಡುಕುತ್ತಿದ್ದಾರೆ.

RELATED ARTICLES
- Advertisment -spot_img

Most Popular