Friday, March 21, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಹೊಸಗದ್ದೆ - ಜಮ್ಮನಹಳ್ಳಿಯಲ್ಲಿ ಬಸ್ ತಂಗುದಾಣ ಉದ್ಘಾಟಿಸಿದ - ಶಾಸಕ ಸಿಮೆಂಟ್ ಮಂಜು 

ಸಕಲೇಶಪುರ : ಹೊಸಗದ್ದೆ – ಜಮ್ಮನಹಳ್ಳಿಯಲ್ಲಿ ಬಸ್ ತಂಗುದಾಣ ಉದ್ಘಾಟಿಸಿದ – ಶಾಸಕ ಸಿಮೆಂಟ್ ಮಂಜು 

ಸಕಲೇಶಪುರ : ಹೊಸಗದ್ದೆ – ಜಮ್ಮನಹಳ್ಳಿಯಲ್ಲಿ ಬಸ್ ತಂಗುದಾಣ ಉದ್ಘಾಟಿಸಿದ – ಶಾಸಕ ಸಿಮೆಂಟ್ ಮಂಜು.

ಸಕಲೇಶಪುರ : ಜಮ್ಮನಹಳ್ಳಿ, ಹೊಸಗದ್ದೆ ಹಾಗೂ ಮಡ್ಡಿನಕೆರೆ ಭಾಗದಲ್ಲಿ ಅನೇಕ ವರ್ಷಗಳಿಂದ ಬಸ್ ನಿಲ್ದಾಣ ವಿಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ಬೀದಿಯಲ್ಲಿ ನಿಲ್ಲುವಂತ ಪರಿಸ್ಥಿತಿಗೆ ಇಂದು ತೆರೆ ಬಿದ್ದಿದೆ’ ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.

ಅವರು ಬುಧುವಾರ ತಾಲ್ಲೂಕಿನ ಕುನಿಗನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮಡ್ಡಿನಕೆರೆ ಹಾಗೂ ಜಮ್ಮನಹಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನದ ಅಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಬಸ್ ತಂಗುದಾಣ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಈ ತಂಗುದಾಣ ಸಕಲೇಶಪುರ ತಾಲ್ಲೂಕಿನ ಹೊಸಗದ್ದೆ, ಮಡ್ಡಿನಕೆರೆ, ಜಮ್ಮನಹಳ್ಳಿ, ಹೊಸಕೆರೆ, ಗಾಳಿಗುಡ್ಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಪ್ರಯಾಣಿಕರು ಹಾಗೂ ಶಾಲೆ ಮಕ್ಕಳಿಗೆ ಆಶ್ರಯವಾಗಿದೆ. ಇದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು’ ಮನವಿ ಮಾಡಿದರು.

RELATED ARTICLES
- Advertisment -spot_img

Most Popular