Tuesday, March 25, 2025
Homeಸುದ್ದಿಗಳುಸಕಲೇಶಪುರಅಯೋಧ್ಯೆ ಬಲಿದಾನ್ ದಿವಸ್ ಅಂಗವಾಗಿ ವಿ.ಎಚ್.ಪಿ ಭಜರಂಗದಳ ವತಿಯಿಂದ ರಕ್ತದಾನ ಶಿಬಿರ

ಅಯೋಧ್ಯೆ ಬಲಿದಾನ್ ದಿವಸ್ ಅಂಗವಾಗಿ ವಿ.ಎಚ್.ಪಿ ಭಜರಂಗದಳ ವತಿಯಿಂದ ರಕ್ತದಾನ ಶಿಬಿರ

ಸಕಲೇಶಪುರ: ಅಯೋಧ್ಯೆ ಬಲಿದಾನ್ ದಿವಸ್ ಅಂಗವಾಗಿ ವಿ.ಎಚ್.ಪಿ ಭಜರಂಗದಳ ಹಾಗೂ ಜೀವ ರಕ್ತದಾನ ನಿಧಿ, ಹಾಸನ ವತಿಯಿಂದ ರಕ್ತದಾನ ಶಿಬಿರ ಪಟ್ಟಣದ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಹಶಿಲ್ದಾರ್ ಜೈಕುಮಾರ್ ಉದ್ಘಾಟಿಸಿದರೆ ಸಮಾರಂಭದ ಅಧ್ಯಕ್ಷರಾಗಿ ಡಾ.ನವೀನ್ ಚಂದ್ರ ಶೆಟ್ಟಿ ಭಾಗವಹಿಸಿದ್ದರು. ಪುರಸಭಾ ಅಧ್ಯಕ್ಷ ಕಾಡಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಯೋಗ ಚೇತನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀರಂಗನಾಥ್ ರವರನ್ನು ಅವರ ಸಮಾಜ ಸೇವೆ ಹಿನ್ನೆಲೆಯಲ್ಲಿ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಜೀವ ರಕ್ತನಿಧಿಯ ಮೋಹನ್ ಕುಮಾರ್, ಮೋಹನ್ ವಿಶೇಷ ಆಹ್ವಾನಿತರಾಗಿ ಭಾಗಿಯಾಗಿದ್ದರು. ಭಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ, ಸಂಘಟನೆ ಮುಖಂಡರುಗಳಾದ ಕೌಶಿಕ್ ಇನ್ನಿತರರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

RELATED ARTICLES
- Advertisment -spot_img

Most Popular