ಸಕಲೇಶಪುರ: ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲೆಗಳನ್ನು ಸಂಪರ್ಕಿಸುವ ಗಡಿಭಾಗದಲ್ಲಿರುವ ಶಿರಾಡಿ ಗಡಿ ಚೌಡೇಶ್ವರಿ ದೇವಸ್ಥಾನದಲ್ಲಿ ಭಜರಂಗದಳ ವತಿಯಿಂದ ಸಂಘಟನೆಗೆ ಹೆಚ್ಚಿನ ಶಕ್ತಿ ದೊರಕಲೆಂದು ವಿಶೇಷ ಪೂಜೆ ನೆರವೇರಿಸಿದ ನಂತರ ಕಾರ್ಯಕರ್ತರು ದೇವಸ್ಥಾನದ ಆವರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ಈ ಸಂಧರ್ಭದಲ್ಲಿ ಭಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ ಮಾತನಾಡಿ ಈ ವರ್ಷ ತಾಲೂಕಿನಲ್ಲಿ ದತ್ತಮಾಲಾ ಅಭಿಯಾನ ಯಾವುದೆ ವಿಘ್ನವಿಲ್ಲದೆ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಗೆ ಮತ್ತಷ್ಟು ಶಕ್ತಿ ಸಿಗಲೆಂದು ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಮಾಡಿಸಲಾಗಿದೆ.ದಿನನಿತ್ಯ ಸಾವಿರಾರು ಭಕ್ತಾಧಿಗಳು ಇಲ್ಲಿಗೆ ಬರುವುದಲ್ಲದೆ ಹಲವು ಭಕ್ತಾಧಿಗಳು ಇಲ್ಲಎ ಬಲಿ ಕೊಟ್ಟು ಪ್ರಸಾದ ಸ್ವೀಕರಿಸುವುದರಿಂದ ದೇವಸ್ಥಾನದ ಆವರಣ ಕಲುಷಿತಗೊಂಡಿದನ್ನು ನೋಡಿ ಸಂಘಟನೆ ವತಿಯಿಂದ ಸ್ವಚ್ಛತಾ ಕಾರ್ಯ ಮಾಡಲಾಗಿದೆ ಎಂದರು. ಭಕ್ತಮುಖಂಡರುಗಳಾದ ಕೌಶಿಕ್, ಪ್ರತಾಪ್, ಮಂಜು, ಸುಭಾಷ್, ದೀಪು ಮುಂತಾದವರು ಹಾಜರಿದ್ದರು.