Monday, November 25, 2024
Homeಸುದ್ದಿಗಳುಸಕಲೇಶಪುರಪಟ್ಟಣದಲ್ಲಿ ಗುರುವಾರ ಅಂಬೇಡ್ಕರ್ ಭವನ ಉದ್ಘಾಟನೆ: ಪುರಸಭಾ ಅಧ್ಯಕ್ಷ ಕಾಡಪ್ಪ

ಪಟ್ಟಣದಲ್ಲಿ ಗುರುವಾರ ಅಂಬೇಡ್ಕರ್ ಭವನ ಉದ್ಘಾಟನೆ: ಪುರಸಭಾ ಅಧ್ಯಕ್ಷ ಕಾಡಪ್ಪ

ಸಕಲೇಶಪುರ: ಪಟ್ಟಣದಲ್ಲಿ ಸುಮಾರು 4 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನವೆಂಬರ್ 17 ರ ಗುರುವಾರದಂದು ಉದ್ಘಾಟನೆ ಆಗಲಿದ್ದು ಈ ಕಾರ್ಯಕ್ರಮಕ್ಕೆ ಸಮುದಾಯದ ಎಲ್ಲಾ ನಾಗರಿಕ ಬಂಧುಗಳು ಆಗಮಿಸಿ ಯಶಸ್ವಿ ಗೊಳಿಸಬೇಕು ಎಂದು ಪುರಸಭೆ ಅಧ್ಯಕ್ಷ ಕಾಡಪ್ಪ ಮನವಿ ಮಾಡಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ನಮ್ಮ ಸಮುದಾಯದ ಬಹುದಿನಗಳ ಆಸೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಭವನ ಉದ್ಘಾಟನೆ ಆಗುವ ಮೂಲಕ ಸಾಕಾರಗೊಳ್ಳಲಿದ್ದು, ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಅವರು ಭವನದ ಉದ್ಘಾಟನೆ ಮಾಡಲಿದ್ದು ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿ ಸಚಿವರಾದ ಕೆ.ಗೋಪಾಲಯ್ಯ , ಅವರು ಸಮಾರಂಭದ ಉದ್ಘಾಟನೆಯನ್ನು ಮಾಡಲಿದ್ದು , ಕ್ಷೇತ್ರದ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದು ಮಾಜಿ ಶಾಸಕರಾದ ಬಿ.ಆರ್.ಗುರುದೇವ್, ಹೆಚ್.ಎಂ ವಿಶ್ವನಾಥ್ ಉಪಸ್ಥಿತರಿರುವರು.ಈ ಸಂದರ್ಭದಲ್ಲಿ ಭವನದ ನಿರ್ಮಾಣಕ್ಕಾಗಿ ಹಿಂದಿನಿಂದಲೂ ಶ್ರಮ ವಹಿಸಿದಂತಹ ಹಿರಿಯ ದಲಿತ ಮುಖಂಡರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವೂ ನಡೆಯಲ್ಲಿದ್ದು ತಾಲೂಕಿನ ಎಲ್ಲಾ ಪ್ರಗತಿಪರ, ಜನಪರ, ಎಲ್ಲಾ ವಿವಿದ ಹಂತಗಳ ಜನ ಪ್ರತಿನಿದಿಗಳು , ಸ್ತ್ರೀ ಶಕ್ತಿ ಮತ್ತು ಸ್ವ ಸಹಾಯ ಸಂಘದ ಎಲ್ಲಾ ಸದಸ್ಯರು ನೌಕರ ಬಂದುಗಳು ಹಾಗೂ ಎಲ್ಲಾ ವರ್ಗದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ದಲಿತ ಮುಖಂಡರಾದ ಲಕ್ಷ್ಮಣ್ ಕೀರ್ತಿ ಮಾತನಾಡಿ ಕಾರ್ಯಕ್ರಮಕ್ಕೂ ಮುನ್ನ ಮಿನಿ ವಿಧಾನ ಸೌಧ ಮುಂಭಾಗದಲ್ಲಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಸಮುದಾಯದ ವತಿಯಿಂದ ಮಾಲಾರ್ಪಣೆ ಮಾಡಿ ವಾದ್ಯಗೋಷ್ಠಿಯ ಮುಖಾಂತರ ಅಂಬೇಡ್ಕರ್ ಭವನಕ್ಕೆ ಸಾಗಿ ವೇದಿಕೆ ಕಾರ್ಯಕ್ರಮಕ್ಕೆ ಭಾಗವಹಿಸಲಾಗುವುದು ಎಂದರು. ಈ ಸಂಧರ್ಭದಲ್ಲಿ ನಲ್ಲುಲಿ ಈರಯ್ಯ, ಪುರಸಭೆ ಮಾಜಿ ಸದಸ್ಯ ನಿರ್ವಾಣಯ್ಯ, ಜಾನೆಕೆರೆ ಲೋಕೇಶ್, ಇದ್ದರು.

RELATED ARTICLES
- Advertisment -spot_img

Most Popular