Tuesday, March 25, 2025
Homeಸುದ್ದಿಗಳುಸಕಲೇಶಪುರಧರ್ಮಸ್ಥಳಕ್ಕೆ 360 ಕಿಮೀ ಕಾಲ್ನಡಿಯಲ್ಲಿ ಬಂದು ಗಿರ್ ಹಸುವನ್ನು ಶ್ರೀ ಕ್ಷೇತ್ರಕ್ಕೆ ಒಪ್ಪಿಸಿದ ಯುವಕ

ಧರ್ಮಸ್ಥಳಕ್ಕೆ 360 ಕಿಮೀ ಕಾಲ್ನಡಿಯಲ್ಲಿ ಬಂದು ಗಿರ್ ಹಸುವನ್ನು ಶ್ರೀ ಕ್ಷೇತ್ರಕ್ಕೆ ಒಪ್ಪಿಸಿದ ಯುವಕ

ಧರ್ಮಸ್ಥಳ :  ಯುವಕನೊಬ್ಬ ತನ್ನ ಬೆಲೆ ಬಾಳುವ ಹಸುವನ್ನು ಕಾಲ್ನಡಿಗೆಯಲ್ಲೇ 360 ಕಿ.ಮೀ ಕ್ರಮಿಸಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಒಪ್ಪಿಸಿದ ಅಪರೂಪದ ವಿದ್ಯಮಾನ ನಡೆದಿದೆ
ಇವರ ಹೆಸರು ಕಳಸದ ಹಿರೇಬೈಲ್ ನ ಶ್ರೇಯಾಂಸ್ ಜೈನ್ . ಇವರು ತಮ್ಮ ಮನೆಯಲ್ಲಿ ಸಾಕುತ್ತಿರುವ ಮೊದಲ ಗಿರ್ ಹಸುವನ್ನು ಶ್ರೀ ಧರ್ಮಸ್ಥಳ ದೇವಸ್ಥಾನಕ್ಕೆ ಅರ್ಪಿಸುವುದಾಗಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಈಗ ಮೊದಲ ಕರುವನ್ನು ಬರೋಬ್ಬರಿ ಎರಡು ವರ್ಷಗಳ ಬಳಿಕ 360 ಕಿ.ಮೀ. ಗಿರ್ ಎತ್ತು ಜೊತೆ ನಡೆದುಕೊಂಡು ಬಂದು ಧರ್ಮಸ್ಥಳಕ್ಕೆ ಅರ್ಪಿಸಿದ್ದಾರೆ. ಧರ್ಮಾಧಿಕಾರಿ ಡಾ.ಡಿ,ವೀರೇಂದ್ರ ಹೆಗ್ಗಡೆಯವರು ಗಿರ್ ಎತ್ತಿಗೆ ತಿನ್ನಲು ಫಲಹಾರ ನೀಡುವ ಮೂಲಕ ಬರಮಾಡಿಕೊಂಡರು. ಶ್ರೇಯಾಂಸ್ ಬೆಂಗಳೂರಿನ ಜಿಗಣಿಯವರು. ಲಾಕ್‌ಡೌನ್ ವೇಳೆ ಕಂಪನಿ ಕೆಲಸವನ್ನು ನಂಬದೆ ದನ ಸಾಕಿ ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡಿದ್ದರು. ಜೈನ್ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಯುವಕ/ಯುವತಿಯರು ಕಾಲ್ನಡಿಗೆಯಲ್ಲೇ ದೇಶ ಸುತ್ತುವುದನ್ನು ನೋಡಿದ್ದೇವೆ. ಆದರೆ ದೇವರ ಕೆಲಸಕ್ಕಾಗಿ ಕಾಲ್ನಡಿಗೆಯಲ್ಲಿ ಇಂತಹದ್ದೊಂದು ಸಾಹಸ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
RELATED ARTICLES
- Advertisment -spot_img

Most Popular