Monday, November 25, 2024
Homeಸುದ್ದಿಗಳುಸಕಲೇಶಪುರವಸತಿ ರಹಿತರ ಹೋರಾಟ 6ನೇ ದಿನಕ್ಕೆ ಅಂತ್ಯ

ವಸತಿ ರಹಿತರ ಹೋರಾಟ 6ನೇ ದಿನಕ್ಕೆ ಅಂತ್ಯ

ಸಕಲೇಶಪುರ : ಶಾಸಕರ ಭರವಸೆ ಮುಕ್ತಾಯಗೊಂಡ ನಿವೇಶನ ರೈತರ ಹೋರಾಟ ಸತತವಾಗಿ 6ನೇ ದಿನಗಳವರೆಗೂ ನೆಡೆದ ಮುಷ್ಕರ ಶನಿವಾರ ಮುಕ್ತಾಯಗೊಂಡಿತು

ಕಳೆದ ಆರು ದಿನಗಳಿಂದ ಪಟ್ಟಣದ ಪುರಭವನದ ಮುಂಭಾಗದಲ್ಲಿ ವಸತಿ ರಹಿತ ಹೋರಾಟ ಸಮಿತಿ ಹಾಗೂ ಯುವ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟ ಅವಧಿ ಮುಸ್ಕುರ ಇಂದು 6ನೇ ದಿನಕ್ಕೆ ಕಾಲಿಟ್ಟಿದ್ದು ಸ್ಥಳಕ್ಕೆ ಶಾಸಕ ಕುಮಾರಸ್ವಾಮಿ ಭೇಟಿ ನೀಡಿ ಮುಂದಿನ ಒಂದು ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಆಶ್ರಯ ಸಮಿತಿಯ ಸಭೆ ಕರೆದು ವಸತಿ ರಹಿತರ ಅರ್ಜಿಗಳನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪ್ರತಿಭಟನಾ ನಿರತ ಮುಖಂಡರಿಗೆ ಭರವಸೆ ನೀಡಿದ ಮೇಲೆ ಮುಷ್ಕರವನ್ನು ಹಿಂಪಡೆದರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹೆಚ್ ಕೆ ಕುಮಾರಸ್ವಾಮಿ ಕೆಲವು ಕಾನೂನು ತೊಡಕು ಗಳಿಂದಾಗಿ ವಸತಿರಹಿತರಿಗೆ ಸೂರು ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಈ ನಿಟ್ಟಿನಲ್ಲಿ ಮುಂದಿನ ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾರ್ಯದರ್ಶಿ ಸಲೀಮ್ ಕೊಲ್ಲಹಳ್ಳಿ ಕಾಂಗ್ರೆಸ್ ಮುಖಂಡರಾದ ಯಡೆಹಳ್ಳಿ ಮಂಜುನಾಥ್, ಕೌಡಳ್ಳಿ ಲೊಹಿತ್, ವಸತಿ ರಹಿತ ಹೋರಟ  ಸಮಿತಿ ಮುಖಂಡರು ಇನ್ನಿತರರು ಇದ್ದರು

RELATED ARTICLES
- Advertisment -spot_img

Most Popular