Monday, April 21, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ನಿವೇಶನ ರಹಿತರ ಪ್ರತಿಭಟನಾ ಧರಣಿ

ಸಕಲೇಶಪುರ : ನಿವೇಶನ ರಹಿತರ ಪ್ರತಿಭಟನಾ ಧರಣಿ

ಸಕಲೇಶಪುರ:26.ಡಿ: ಅರ್ಹ ಪಲಾನುಭವಿಳಿಗೆ ನೀವೆಶನ ನೀಡುವಂತೆ ಒತ್ತಾಯಿಸಿ ಯೂತ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಪುರಭವನ ಮುಂಬಾಗ ಪ್ರತಿಭಟನೆ ನಡೆಯಿತು.

ಸಕಲೇಶಪುರ ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿವೇಶನ ಮತ್ತು ವಸತಿಗಾಗಿ ಕುಟುಂಬಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷವೂ ನಿವೇಶನ ರಹಿತರ ಪಟ್ಟಿಯನ್ನು ಬಿಡುಗಡೆ ಪುರಸಭೆಯ ಜವಾಬ್ದಾರಿಯಾಗಿದ್ದು, ಇದುವರೆಗೂ ಪುರಸಭೆ ನಿವೇಶನ ರಹಿತರ ಯಾವುದೇ ಪಟ್ಟಿ ಮಾಡುವುದಾಗಲೀ, ನಿವೇಶನ ಹಂಚಿಕೆ ಮಾಡುವುದಾಗಲಿ ಮಾಡಿರುವುದಿಲ್ಲ ಎಂದು ಪ್ರತಿಭಟನಕಾರು ಅರೋಪಿಸಿದರು.

ಪಟ್ಟಣದಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ವಾಸಕ್ಕಾಗಿ ಬಾಡಿಗೆ ಮನೆಯನ್ನು ಅವಲಂಬಿಸಿ, ಕಷ್ಟದಿಂದ ಜೀವನ ನಡೆಸಿಕೊಂಡು ಬಂದಿರುತ್ತಾರೆ. ವಸತಿ ಉದ್ದೇಶಕ್ಕೆ ಅನುಕೂಲವಾಗುವಂತೆ ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವೇಶ ರಹಿತರ ಪಟ್ಟಿಯನ್ನು ಬಿಡುಗಡೆಗೊಳಿಸಿ, ವಾಸಕ್ಕೆ ಮನೆ ನಿರ್ಮಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸುವಂತೆ ನಿರಂತರವಾಗಿ ಅರ್ಜಿ

ಸಲ್ಲಿಸುತ್ತಾ ಬಂದರೂ ಸಹ, ಪುರಸಭೆಯು ಪಟ್ಟಿ ಬಿಡುಗಡೆ ಮಾಡದೆ ಕಾಲಾಹರಣ ಮಾಡುತ್ತಿದೆ ಎಂದರು.ಪಟ್ಟಣದಲ್ಲಿ ನಿವಾಸಿಗಳು ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಿವೇಶನ ರಹಿತರು ಸಾವಿರಾರು ಅರ್ಜಿಗಳನ್ನು ಸಲ್ಲಿಸಿದ್ದು, ಈ ಸಂಬಂಧ ಹಲವಾರು ಬಾರಿ ಪ್ರತಿಭಟನೆಗಳನ್ನು ಮಾಡಿ, ಪತ್ರಿಕಾ ಹೇಳಿಕೆ ನೀಡಿ, ಮನವಿಗಳನ್ನು ಸಲ್ಲಿಸಿದ್ದರೂ ಕೂಡ ಏನೂ ಪ್ರಯೋಜನವಾಗಿರುವುದಿಲ್ಲ ಎಂದರು.

ಶಾಸಕರು ತಿಂಗಳ ಒಳಗೆ ನಿವೇಶನ ರಹಿತರ ಪಟ್ಟಿ ಬಿಡುಗಡೆ ಆಶ್ವಾಸನೆ ನೀಡಿದ್ದು, ಇಂದಿನವರೆಗೂ ಸುಮಾರು 9 ತಿಂಗಳು ಕಳೆದರೂ ಆಶ್ವಾಸನೆ ಈಡೇರಿಸಿಲ್ಲ ಎಂದು ಅರೋಪಿಸಿದರು

ಪಟ್ಟಣದಲ್ಲಿ ಕಸವಿಲೇವಾರಿ ಹಾಗೂ ಶುದ್ದ ಕುಡಿಯುವ ನೀರಿನ ಘಟಕ, ಹಿಂದು ರುದ್ರಭೂಮಿಗೆ ಹೊಂದಿಕೊಂಡಂತೆ ಪಟ್ಟಣದ ಕಸವನ್ನು ಇಲ್ಲಿ ವಿಲೇವಾರಿ ಮಾಡುತ್ತಿರು ಬೇರೆಕಡೆಗೆ ಸ್ಥಳಾಂತರಿಸಬೇಕು, ಕುಡುಗರಹಳ್ಳಿ ಮತ್ತು ಆಚಂಗಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸ್ಮಶಾನಕ್ಕೆ ಭೂಮಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಹಾನುಬಾಳು ಭಾಸ್ಕರ್, ತುಳಸಿ ಪ್ರಸಾದ್, ಎಡೆಹಳ್ಳಿ ಮಂಜುನಾಥ್ , ಭುವನಾಕ್ಷ, ಸೌಮ್ಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ನದೀಮ್ ಶರೀಫ್ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಾಜಿ ಶಾಸಕ ಡಿ ಮಲ್ಲೇಶ್, ಕೋಡಿಹಳ್ಳಿ ಚಂದ್ರಶೇಖರ, ಕೆಪಿಸಿಸಿ ಸದಸ್ಯ ಯಡೆಹಳ್ಳಿ ಮಂಜುನಾಥ್,   ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಭಾಸ್ಕರ್, ಯೂಥ್ ಕಾಂಗ್ರೆಸ್ ಅಧ್ಯಕ್ಷ ನದೀಮ್ ನಿವೇಶನ ರಹಿತ ಅಧ್ಯಕ್ಷ ಯೂನಸ್, ಗೊರೂರು ವೆಂಕಟೇಶ್, ಭುವನಕ್ಷ,  ಸೌಮ್ಯ, ಕಾಂಗ್ರೆಸ್ ಮುಖಂಡರಾದ ಆಚಂಗಿ ಮಹಮ್ಮದ್, ತುಳಸಿ ಪ್ರಸಾದ್ ಫಾರೂಕ್, ಮತ್ತು ದಸಂಸ ರಮೇಶ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

RELATED ARTICLES
- Advertisment -spot_img

Most Popular