Monday, April 21, 2025
Homeಸುದ್ದಿಗಳುBreaking News : ಕಾಡಾನೆ ಟಾಸ್ಕ್ ಫೋರ್ಸ್ ನಿಯಂತ್ರಣ ಕೊಠಡಿ ಉದ್ಘಾಟನೆ. ...

Breaking News : ಕಾಡಾನೆ ಟಾಸ್ಕ್ ಫೋರ್ಸ್ ನಿಯಂತ್ರಣ ಕೊಠಡಿ ಉದ್ಘಾಟನೆ.  ಅರಣ್ಯ ಇಲಾಖೆಯ ಹೆಚ್ಚುವರಿ ಅಪಾರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ರಿಂದ ಚಾಲನೆ

ಕಾಡಾನೆ ಟಾಸ್ಕ್ ಫೋರ್ಸ್ ನಿಯಂತ್ರಣ ಕೊಠಡಿ ಉದ್ಘಾಟನೆ.

ಅರಣ್ಯ ಇಲಾಖೆಯ ಹೆಚ್ಚುವರಿ ಅಪಾರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ರಿಂದ ಚಾಲನೆ

ಸಕಲೇಶಪುರ : ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸದಾಗಿ ರಚಿಸಿರುವ ಟಾಸ್ಕ್ ಪೋಸ್ಟ್ ಕಚೇರಿಯು ಸಕಲೇಶಪುರದಲ್ಲಿ ಇಂದು ನಿಯಂತ್ರಣ ಕೊಠಡಿ ಉದ್ಘಾಟಿಸಲಾಯಿತು.

ರಾಜ್ಯ ಸರ್ಕಾರದ ಅರಣ್ಯ ಇಲಾಖೆಯ ಹೆಚ್ಚುವರಿ ಅಪಾರ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಡಾನೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಕ್ರಮವನ್ನು ಕೈಗೊಂಡಿದ್ದು ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದು ಈ ಸಮಿತಿಯಲ್ಲಿ ಉನ್ನತ ಮಠದ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡುವುದು, ಇಲಾಖೆಯ ಸಿಬ್ಬಂದಿಗಳಿಗೆ ಆಧುನಿಕ ಸಲಕರಣೆಗಳನ್ನು ನೀಡುವುದು ಹಾಗೂ ದಿನದ 24 ಗಂಟೆಯೂ ಕೂಡ ಕಂಟ್ರೋಲ್ ರೂಂ ಕೆಲಸ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಈ ಸಮಿತಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ನೀಡಲಾಗುವುದು, ಎಂದು ತಿಳಿಸಿದರು.

ಇದೇ ವೇಳೆ ಪಟಾಕಿ ಸಿಡಿಸಲು ವಿನೂತನವಾಗಿ ತಯಾರಿಸಿದ್ದ ಸಲಕರಣೆಯ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದರು.

ಇದೆ ವೇಳೆ ಅರಣ್ಯ ಇಲಾಖೆಯ ವತಿಯಿಂದ ಕಾಡಾನೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಚಾರ ಸೇರಿದಂತೆ ಇನ್ನಿತರ ಉಪಯೋಗಗಳಿಗೆ ನೂತನವಾದ ವಾಹನಗಳಿಗೆ ಹಸಿರು ನಿಶಾನೆ ತೋರಿಸಲಾಯಿತು.

ಈ ಸಂದರ್ಭದಲ್ಲಿ ಕುಮಾರ್ ಪುಷ್ಕರ್ ಪಿಸಿಸಿಎಫ್ ವೈಲ್ಡ್ ಲೈಫ್,ಸಿದ್ದರಮ್ಮಪ್ಪ ಸಿಸಿಎಫ್, ಬಸವರಾಜು ಡಿಎಫ್ಓ, ಎಸಿಎಫ್ ಗಳಾದ ರಘು ಹಾಗೂ ಸುರೇಶ್, ವಲಯ ಅರಣ್ಯ ಅಧಿಕಾರಿ ಶಿಲ್ಪ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular