Sunday, November 24, 2024
Homeಸುದ್ದಿಗಳುಹೆತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಗಾರದ ಉದ್ಘಾಟನೆ : ವಿದ್ಯಾರ್ಥಿಗಳಿಗೆ ಎ.ಎಸ್.ಪಿ ಮಿಥುನ್...

ಹೆತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಗಾರದ ಉದ್ಘಾಟನೆ : ವಿದ್ಯಾರ್ಥಿಗಳಿಗೆ ಎ.ಎಸ್.ಪಿ ಮಿಥುನ್ ಅವರಿಂದ ಉಪನ್ಯಾಸ

ಸಕಲೇಶಪುರ/ಹೆತ್ತೂರು : ಹಳೆ ವಿದ್ಯಾರ್ಥಿಗಳ ಸಂಘ (ರಿ.), ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು ಇವರ ಆಯೋಜಕತ್ವದಲ್ಲಿ ಜನರಲ್ ಬಿಪಿನ್ ರಾವತ್ ಪ್ರಥಮ ದರ್ಜೆ ಘಟಕ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು ಹೆತ್ತೂರು ಮತ್ತು ಕಸಾಪ ಹೋಬಳಿ ಘಟಕ ಹೆತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಸಕಲೇಶಪುರದ ಸಹಾಯಕ ಪೋಲೀಸ್ ಅಧೀಕ್ಷಕ ಶ್ರೀಯುತ ಮಿಥುನ್ ಐಪಿಎಸ್ ನೆರವೇರಿಸಿದರು.ಆ ಬಳಿಕ ‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಸತತ ಅಭ್ಯಾಸ ನನ್ನ ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ಕಾರಣ ಎಂದರು. ಅಭ್ಯರ್ಥಿಯು ಯಾವುದೇ ಸಾಮಾಜಿಕ ಹಿನ್ನೆಲೆ ಇದ್ದರೂ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಹುದ್ದೆಗಳನ್ನುಪಡೆಯುವ ಅವಕಾಶ ಪಡೆಯಬಹುದು. ಇದರಿಂದ ಸಮಾಜದಲ್ಲಿ ಎಲ್ಲರೊಂದಿಗೆ ಸರಿಸಮಾನರಾಗಿ ನಿಲ್ಲುವ ಅವಕಾಶ ದೊರೆಯುತ್ತದೆ ಹಾಗೂ ಸಾರ್ವಜನಿಕ ಸೇವೆ ಮಾಡಬಹುದು ಎಂದರು. ಐಪಿಎಸ್ ಉತ್ತೀರ್ಣರಾದ ಕಾರಣಕ್ಕೆ ನಾನು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯನ್ನು ಭೇಟಿಯಾಗುವ ಅವಕಾಶ ದೊರೆಯಿತು. ವಿದ್ಯಾರ್ಥಿಗೆ ವ್ಯಕ್ತಿತ್ವ ವಿಕಸನವು ಅತಿ ಮುಖ್ಯ, ಅದು ಸ್ಪರ್ಧಾತ್ಮಕ ಪರೀಕ್ಷೆಯಿಂದ ಮಾತ್ರ ಸಾಧ್ಯ ಎಂದರು. ಯಾವುದೇ ವಿಷಯದಲ್ಲಿ 10,000 ಗಂಟೆಗಳ ನಿರಂತರ ಅಭ್ಯಾಸದಿಂದ ಆ ವಿಷಯದಲ್ಲಿ ತಜ್ಞರಾಗಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನರಲ್ ಬಿಪಿನ್ ರಾವತ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಭಾರತಿ ಪಿ. ಟಿ. ವಹಿಸಿದ್ದರು.

ಹೆತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬೆಟ್ಟದಹಳ್ಳಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡುತ್ತ “ಸ್ಪರ್ಧಾ ಕಿರಣ”ದ ಗುರಿಗಳು, ಕಾರ್ಯ ಯೋಜನೆಯನ್ನು ತಿಳಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಮತಿ ಉಜ್ಮಾ ರಿಜ್ವಿ ಸುದರ್ಶನ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆತ್ತೂರು ಇದರ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸಚಿನ್ ಹೆಚ್.ಎಂ. ಹಾಗೂ ಸ್ಥಳೀಯ ದಾನಿಗಳಾದ ಶ್ರೀ ಸುದರ್ಶನ್, ಸಂಪನ್ಮೂಲ ವ್ಯಕ್ತಿಗಳು ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular