ಸಕಲೇಶಪುರ: ಹಾಸನ ಜಿಲ್ಲಾ ಬೆಳೆಗಾರರ ಸಂಘದ ವತಿಯಿಂದ ಡಿಸೆಂಬರ್ 5-12-2022 ರಂದು ನಡೆಯುವ ವಿಶ್ವ ಮಣ್ಣು ದಿನಾಚರಣೆಯ ಅಂಗವಾಗಿ ಮಣ್ಣೇ ಹೊನ್ನು ವಿಷಯಧಾರಿತವಾಗಿ ವಿಚಾರ ಸಂಕೀರಣ ಹಮ್ಮಿಕೊಂಡಿದ್ದು, ಇದರ ಅಂಗವಾಗಿ 9ನೇ ತರಗತಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶುಕ್ರವಾರ ಮಣ್ಣಿನ ಮಹತ್ವ ಕುರಿತಾದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಕಲೇಶಪುರದ ಹಾಸನ ಜಿಲ್ಲಾ ಪ್ಲಾಂಟ್ ಸಂಘದ ಸಭಾಂಗಣದಲ್ಲಿ ಹಾಗೂ ಬೇಲೂರಿನ ವಿಶ್ವ ಪದವಿ ಪೂರ್ವ ಕಾಲೇಜಿನಲ್ಲಿ ಎರಡು ಕೇಂದ್ರಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬೇಲೂರಿನಲ್ಲಿ ಒಟ್ಟು 38 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಸಕಲೇಶಪುರದ ಸಂಘದ ಕೇಂದ್ರ ಕಚೇರಿಯಲ್ಲಿ ಒಟ್ಟು ಆರು ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಕಲೇಶಪುರದಲ್ಲಿ ದೀಪ ಬೆಳಗುವುದರೊಂದಿಗೆ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಹೆಚ್.ಡಿ.ಪಿ.ಎ ಅಧ್ಯಕ್ಷರಾದ ಕೆ. ಎನ್ ಸುಬ್ರಹ್ಮಣ್ಯ ರವರು , ಉಪಾಧ್ಯಕ್ಷರಾದ ಎ.ಎಸ್ ಪರಮೇಶ್ ಅವರು, ಖಜಾಂಚಿಗಳಾದ ಎಂ.ಎಸ್ ಚಂದ್ರಶೇಖರ್ ರವರು ಹಾಜರಿದ್ದರು. ಅದೇ ರೀತಿಯಾಗಿ ಬೇಲೂರಿನಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಲಾಯಿತು.ವಿಶ್ವ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರು, ಬೇಲೂರು ತಾಲೂಕು ಬೆಳಗಾರರ ಸಂಘದ ಅಧ್ಯಕ್ಷರಾದ ಅದ್ದೂರಿ ಎಂ ಕುಮಾರ್ ರವರು, ಹೆಚ್‍ಡಿಪಿಎ ನಿರ್ದೇಶಕರಾದ ವೈ.ಎಸ್ ಸಿದ್ದೇಗೌಡರವರು, ಬೇಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹಾಗೂ ಸಿಇಓಗಳು ಉಪಸ್ಥಿತರಿದ್ದರು. ವಿಜೇತರಿಗೆ ವಿಶ್ವ ಮಣ್ಣು ದಿನಾಚರಣೆಯ ದಿನದಂದು ಬಹುಮಾನ ವಿತರಿಸಲಾಗುವುದು ಹಾಗೂ ವಿಜೇತರಿಗೆ ಡಿಸೆಂಬರ್ ಐದರಂದು ಮಣ್ಣಿನ ಮಹತ್ವದ ವಿಷಯವನ್ನು ಮಂಡಿಸಲು ಅವಕಾಶ ಕಲ್ಪಿಸಲಾಗುವುದು.