ಬಾಳ್ಳುಪೇಟೆ : ಶ್ರದ್ದಾ ಶಕ್ತಿಯಿಂದ ಸುಬ್ರಹ್ಮಣ್ಯ ಷ್ರಷ್ಠಿ ಆಚರಣೆ
ಸಕಲೇಶಪುರ; ತಾಲೂಕಿನ ಬಾಳ್ಳುಪೇಟೆಯ ಬಸವೇಶ್ವರ ನಗರದಲ್ಲಿರುವ ನಾಗ ದೇಗುಲದಲ್ಲಿ ಷ್ರಷ್ಠಿ ಹಬ್ಬವನ್ನು ಸಾವಿರಾರು ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ ಆಚರಿಸಿದರು.
ಮಂಗಳವಾರ ಮುಂಜಾನೆಯಿಂದಲೇ ನಾಗದೇವರಿಗೆ ಪಂಚಾಮೃತ ಅಭಿಷೇಕ, ಆಶ್ಲೇಷಬಲಿ ಜರುಗಿತು ಮಧ್ಯಾಹ್ನ 12:30ಕ್ಕೆ ಶ್ರೀ ಸ್ವಾಮಿಯವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ವೇದ ಬ್ರಹ್ಮಶ್ರೀ ಗಣಪತಿಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.
ಬೃಹತ್ ಅನ್ನ ದಾಸೋಹ ಏರ್ಪಡಿಸಲಾಗಿತ್ತು.