Monday, November 25, 2024
Homeಸುದ್ದಿಗಳುನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಅಧಿಕೃತ - ಆರ್. ಎಸ್ ದಿನೇಶ್. ...

ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಅಧಿಕೃತ – ಆರ್. ಎಸ್ ದಿನೇಶ್. ಕರವೇ ಹೆಸರು ದುರ್ಬಳಕೆ ಮಾಡಿಕೊಂಡರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ – ರಘು ಪಾಳ್ಯ. ಕ್ರಮ ಜರುಗಿಸುವಂತೆ dysp ಮಿಥುನ್ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು.

ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಅಧಿಕೃತ – ಆರ್. ಎಸ್ ದಿನೇಶ್.

ಕರವೇ ಹೆಸರು ದುರ್ಬಳಕೆ ಮಾಡಿಕೊಂಡರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ – ರಘು ಪಾಳ್ಯ.

ಕ್ರಮ ಜರುಗಿಸುವಂತೆ dysp ಮಿಥುನ್ ಮನವಿ ಸಲ್ಲಿಸಿದ ಕರವೇ ಕಾರ್ಯಕರ್ತರು.

ಸಕಲೇಶಪುರ : ಕರ್ನಾಟಕ ರಕ್ಷಣಾ ವೇದಿಕೆಯ ಹೆಸರು ದುರ್ಬಳಕೆ ಮಾಡಿ ಕೊಳ್ಳುತ್ತಿರುವ ಬಗ್ಗೆ ದಾಖಲಿಸಿದ್ದ ಮೊಕದ್ದಮೆ ಸಂಬಂಧ ಸಂಘಟನೆಯ ಹೆಸರನ್ನು ಅನಧಿ ಕೃತ ವ್ಯಕ್ತಿಗಳು ಬಳಸದಂತೆ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ನೀಡಿದೆ ಎಂದು ವೇದಿಕೆ ತಾಲೂಕು ಅಧ್ಯಕ್ಷ ಆರ್. ಎಸ್ ದಿನೇಶ್ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಪ್ರಕಾರ ನೋಂದಣಿಯಾಗಿದೆ. ಟಿ.ಎ.ನಾರಾಯಣಗೌಡ ವೇದಿಕೆಯ ರಾಜ್ಯಾಧ್ಯಕ್ಷರಾಗಿ ದ್ದಾರೆ. ಆದರೆ ಸಂಘದ ಸದಸ್ಯತ್ವ ಹೊಂದದ ಹಾಗೂ ಉಚ್ಚಾಟಿಸಲ್ಪಟ್ಟವರು ವೇದಿಕೆಗೆ ಕೆಟ್ಟ ಹೆಸರು ತರಲು ಸಂಘಟನೆ ಹೆಸರು ಬಳಸಿದ್ದರು. ಇದರ ವಿರುದ್ಧ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡಿದ್ದು, ಅನ್ಯ ವ್ಯಕ್ತಿಗಳು ಸಂಘಟನೆ ಹೆಸರು ಬಳಸದಂತೆ ಶಾಶ್ವತ ತಡೆಯಾಜ್ಞೆ ನೀಡಿದೆ. ಆದ್ದರಿಂದ ತಾಲೂಕಿನಲ್ಲಿ ಕೆಲ ಸಂಘಟನೆಗಳು ಕರ್ನಾಟಕ ರಕ್ಷಣಾ ವೇದಿಕೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಾಲೂಕು ಕರವೇ ಅಧ್ಯಕ್ಷ ಆರ್. ಎಸ್ ದಿನೇಶ್ ಹಾಗೂ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ನೇತೃತ್ವದಲ್ಲಿ ಡಿ.ವೈಎಸ್. ಪಿ ಮಿಥುನ್ ಅವರಿಗೆ ಪಿಎಸ್ಐ ಬಸವರಾಜ್ ಹಾಗೂ ಶಿವಶಂಕರ್ ರವರ ಮೂಲಕ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಬೆಳಗೋಡು ಹೋಬಳಿ ಘಟಕ ಕರವೇ ಅಧ್ಯಕ್ಷ ರವೀಶ್, ತಾಲೂಕು ಕರವೇ ಸಾಮಾಜಿಕ ಜಾಲತಾಣದ ದುಷ್ಯಂತ್ ಮೂಗಲಿ,ಬೆಳಗೋಡು ಘಟಕ ಗೌರವಧ್ಯಕ್ಷ ರಾಜು.

RELATED ARTICLES
- Advertisment -spot_img

Most Popular