ಸಕಲೇಶಪುರ: ಟಿಪ್ಪು ಸುಲ್ತಾನ್ ರವರ ಕೊಡುಗೆಗಳು ಸಮಾಜಕ್ಕೆ ಹಾಗೂ ಇಂದಿನ ವ್ಯವಸ್ಥೆಗೆ ಪೂರಕವಾಗಿದೆ ಎಂದು ವಿಚಾರವಾದಿ ಯಡೇಹಳ್ಳಿ ಆರ್ ಮಂಜುನಾಥ್ ಹೇಳಿದರು.
ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಸರ್ವರಿಗೂ ಸಮಪಾಲು ಎಂಬ ದೋರಣೆಯೊಂದಿಗೆ ಆಡಳಿತ ನಡೆಸಿದರು, ಅವರ ಆಡಳಿತ ಅವಧಿಯಲ್ಲಿ ಭೂರಹಿತರಿಗೆ ಭೂಮಿ ನೀಡಿದ್ದರು, ಪ್ರಜೆಗಳು ಯಾವುದೇ ರೀತಿಯ ಸಂಕಷ್ಟಕ್ಕೆ ಈಡಗಬಾರದೆಂದು ವಿನೂತನ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವರ ಆಡಳಿತಾವಧಿಯಲ್ಲಿ ಯುದ್ಧಗಳೇ ಹೆಚ್ಚಿದ್ದರು ಸಹ ರಾಜ್ಯದ ಪ್ರಗತಿಗೆ ಹಾಗೂ ಪ್ರಜೆಗಳಿಗೆ ದಕ್ಕೆಯಾಗಬಾರದು ಎಂಬ ನಿಟ್ಟಿನಲ್ಲಿ ಆಡಳಿತವನ್ನು ನಡೆಸಿದರು.ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪುಸುಲ್ತಾನ್ , ದೇಶವನ್ನು ಬ್ರಿಟಿಷರ ಆಳ್ವಿಕೆಯಿಂದ ತಪ್ಪಿಸಬೇಕು ಎಂಬ ಉದ್ದೇಶದಿಂದ ತನ್ನ ಪ್ರಾಣವನ್ನೇ ಸಮರ್ಪಿಸಿಕೊಂಡ ದೇಶದ ಏಕೈಕ ರಾಜ ಎಂದರು.
ವಿಚಾರವಾದಿ ಖ್ಯಾತ ವಾಗ್ಮಿ ಇಬ್ರಾಹಿಂ ಮುಸ್ಲಿಯಾರ್ ಮಾತನಾಡಿ, ಟಿಪ್ಪುಸುಲ್ತಾನ್ ಸಮರ್ಥ ಆಡಳಿತದ ಜೊತೆಗೆ ಸರ್ವ ಸಮಾಜದ ಜೊತೆ ಅಡಳಿತ ನಡೆಸುವುದು ಹೇಗೆ ಎಂಬುದನ್ನು ಇದರ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅವರ ಆಡಳಿತದಲ್ಲಿ ಮದ್ಯಪಾನ ಸಂಪೂರ್ಣ ನಿಷೇ‘ ವಾಗಿತ್ತು, ಪ್ರಜೆಗಳು ಆರೋಗ್ಯದಿಂದ ಕೂಡಿರಬೇಕು ಹಾಗೂ ರಾಜ್ಯ ಬಲಿಷ್ಟವಾಗಿರಬೇಕು ಎಂಬ ಉದ್ದೇಶದಿಂದ ಅಮಲು ಪದಾರ್ಥಗಳ ವಹಿವಾಟು ಕಠಿಣ ಶಿಕ್ಷೆಗೆ ಒಳಗಾಗುತ್ತಿತ್ತು. ದೇಶವನ್ನು ಬ್ರಿಟೀಷ್ ಆಡಳಿತಕ್ಕೆ ಒಳಪಡಬಾರದು ಎಂದು ಜಾಗತಿಕ ಶಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಯಶಸ್ಸು ಸಹ ಆಗಿದ್ದರು ಎಂದರು.
ಯಾವುದೆ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್‌ತ್ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಕಾಡಪ್ಪ, ಪುರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಮುಪೀಜ್, ಕಾಂಗ್ರೆಸ್ ಮುಖಂಡರಾದ ಡಿಸಿ ಸಣ್ಣಸ್ವಾಮಿ, ಮುರಳಿ ಮೋಹನ್, ಹಾನುಬಾಳ್ ಭಾಸ್ಕರ್, ತುಳಸಿ ಪ್ರಸಾದ್, ಫಾರೂಕ್, ನದೀಮ್, ಪುರಸಭೆ ಸದಸ್ಯರಾದ ಅಣ್ಣಪ್ಪ, ಇಸ್ರಾರ್ ಅಹಮದ್, ದಲಿತ ಮುಖಂಡ ರಾದ ಎಸ್.ಎನ್ ಮಲ್ಲಪ್ಪ, ವೇಣು ಭಾರತೀಯ, ಪತ್ರಕರ್ತ ಮಲ್ನಾಡ್ ಮೆಹಬೂಬ್,
ಬಿ ಎಸ್ ಪಿ ಅಧ್ಯಕ್ಷ ತಮ್ಮಯ್ಯ, ರಹೀಮ್, ಸುಲೇಮಾನ್ ಮುಂತಾದವರು ಇದ್ದರು.