Monday, November 25, 2024
Homeಸುದ್ದಿಗಳುಹೊಸ ಐಟಿ ನಿಯಮ: 26 ಲಕ್ಷ ಭಾರತೀಯರ Whatsapp ಖಾತೆ ಬ್ಯಾನ್‌

ಹೊಸ ಐಟಿ ನಿಯಮ: 26 ಲಕ್ಷ ಭಾರತೀಯರ Whatsapp ಖಾತೆ ಬ್ಯಾನ್‌

 

ಹೊಸ ಐಟಿ ನಿಯಮ ಅದರದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ 26 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಮೆಟಾ ಮಾಲೀಕತ್ವದ Whatsapp ನಿಷೇಧಿಸಿದೆ.

ದೇಶದಲ್ಲಿ ಸುಮಾರು 500 ಮಿಲಿಯನ್ ಬಳಕೆದಾರರನ್ನು (ಥರ್ಡ್-ಪಾರ್ಟಿ ಡೇಟಾದ ಪ್ರಕಾರ) ಹೊಂದಿರುವ ವಾಟ್ಸಾಪ್ ಸೆಪ್ಟೆಂಬರ್ ನಲ್ಲಿ ಭಾರತದಿಂದ 666 ದೂರುಗಳು ವರದಿಯಾಗಿವೆ.

ಐಟಿ ನಿಯಮಗಳು 2021 ರ ಪ್ರಕಾರ, ನಾವು 2022 ರ ಸೆಪ್ಟೆಂಬರ್ ತಿಂಗಳ ನಮ್ಮ ವರದಿಯನ್ನು ಪ್ರಕಟಿಸಿದ್ದೇವೆ. ಈ ಬಳಕೆದಾರ-ಸುರಕ್ಷತಾ ವರದಿಯು ಸ್ವೀಕರಿಸಿದ ಬಳಿಕ ವಾಟ್ಸಾಪ್ ತೆಗೆದುಕೊಂಡ ಸಂಬಂಧಿತ ಕ್ರಮಗಳ ವಿವರಗಳು ಮತ್ತು ನಮ್ಮ ಪ್ಲಾಟ್ಫಾರ್ಮ್ನಲ್ಲಿ ದುರುಪಯೋಗವನ್ನು ಎದುರಿಸಲು ವಾಟ್ಸಾಪ್ನ ಸ್ವಂತ ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿದೆ’ ಎಂದು ಕಂಪನಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಗಸ್ಟ್ನಲ್ಲಿ ಭಾರತದಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ. ನವೀಕರಿಸಿದ ಐಟಿ ನಿಯಮಗಳು 2021 ರ ಅಡಿಯಲ್ಲಿ, ಪ್ರಮುಖ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು, ಐದು ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಮಾಸಿಕ ಅನುಸರಣಾ ವರದಿಗಳನ್ನು ಪ್ರಕಟಿಸಬೇಕಾಗುತ್ತದೆ ಎಂದು ತಿಳಿಸಿವೆ.

RELATED ARTICLES
- Advertisment -spot_img

Most Popular