ಸಕಲೇಶಪುರ : ಕರಡಿಗಾಲದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆ ನಾಶ.
ಕಾಡಾನೆಗಳನ್ನು ಸ್ಥಳಾಂತರಿಸುವಂತೆ ರೈತ ಮದನ್ ಆಗ್ರಹ.
ಸಕಲೇಶಪುರ : ಹೆತ್ತೂರು ಹೋಬಳಿಯ ಕರಡಿಗಾಲ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿವೆ ಎಂದು ರೈತ ಮದನ್ ಅವರು. ತಿಳಿಸಿದ್ದಾರೆ.
ಮದನ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಮನಸ್ಸು ಇಚ್ಛೆ ದಾಂದಲೆ ನಡೆಸಿವೆ.ಕಟಾವಿಗೆ ಬಂದಿದ್ದ ಬಾಳೆ ಬೆಳೆ ಕೂಡ ಕಾಡಾನೆಗಳ ಪಾಲಾಗಿದೆ. ತಾಲೂಕಿನಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿ ಮಿತಿಮೀರಿದು ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆಯೇ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರು ಹಾಗೂ ಬೆಳೆಗಾರರ ಪರಿಸ್ಥಿತಿ ಹದಗಿಡಲಿದ್ದು ತಕ್ಷಣವೇ ಸರ್ಕಾರ ಕಾಡಾನೆಗಳನ್ನು ಈ ಭಾಗದಿಂದ ಸ್ಥಳಾಂತರಿಸಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ವರ್ಷವಿಡಿ ಕಷ್ಟ ಪಡೆದು ಬೆಳೆದ ಬೆಳೆ ಕಾಡಾನೆಗಳ ಪಾಲಾಗುತ್ತಿದ್ದು ದಿನಕೊಬ್ಬರಂತೆ ರೈತರು ಹಾಗೂ ಬೆಳೆಗಾರರು ಬೀದಿಗೆ ಬರುವ ಪರಿಸ್ಥಿತಿ ಅನಿವಾರ್ಯವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.