ಸಕಲೇಶಪುರ :- ತಾಲೂಕಿನ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಾಳ್ಳುಪೇಟೆಯ ಬಿ. ಸಿದ್ದಣ್ಣಯ್ಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಅವರು ನಿಧನರಾಗಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಇಲ್ಲಿಯ ತನಕ ಕೋಮಾ ವ್ಯವಸ್ಥೆಯಲ್ಲಿದ್ದರು. ಅಪಘಾತವಾದ ನಂತರ ಶಿಕ್ಷಕ ವೃತ್ತಿ ನಿರ್ವಹಿಸಲಾಗದೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು.
ಇಂದು ಇಡೀ ದಿನ ಬಾಳ್ಳುಪೇಟೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು. ಮೃತರ ಅಂತ್ಯಕ್ರಿಯೆ ನಾಳೆ ಅವರ ಸ್ವಗ್ರಾಮ ಅರಸೀಕೆರೆಯಲ್ಲಿ ನೆಡೆಯಲಿದೆ
೧1