ಸಕಲೇಶಪುರ :- ಸಕಲೇಶಪುರ, ಆಲೂರು ತಾಲೂಕಿನ ರೈತರ, ಬೆಳೆಗಾರು ಹಾಗೂ ಸಾರ್ವಜನಿಕರ ನೆಮ್ಮದಿ ಕೆಡಿಸಿರುವ ಕಾಡಾನೆಗಳ ಹಾವಳಿ ವಿರುದ್ದ ಬೃಹತ್ ಪ್ರತಿಭಟನೆಗೆ ಕರವೇ ಸಿದ್ದವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹಾಗೂ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ರಘು ಪಾಳ್ಯ ನಿರಂತರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ಆಲೂರು ತಾಲೂಕಿನ ನಿಡನೂರು ಗ್ರಾಮದಲ್ಲಿ ಬೆಳೆಗಾರಾದ ದೇವರಾಜ್ ಅವರು ಮುಂಜಾನೆ ಕಾಫಿ ತೋಟಕ್ಕೆ ಪೈಪ್ ಗಳನ್ನು ಹೊತ್ತಿಕೊಂಡು ಹೋಗುತ್ತಿರುವಾಗ ಐದು ಆನೆಗಳಿದ್ದ ಹಿಂಡಿನಿಂದ ಒಂದು ಆನೆ ಬೇರ್ಪಟ್ಟು ದೇವರಾಜ್ ಅವರ ಮೇಲೆ ಏಕಾಏಕಿ ದಾಳಿ ನಡೆದಿದೆ ತೀವ್ರವಾಗಿ ಗಾಯಗೊಂಡ ಅವರನ್ನು ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಡಾನೆ ದಾಳಿಯಿಂದ ಇದುವರೆಗೂ 75ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನೂರಾರು ಜನರು ಗಾಯಗೊಂಡು ಅಂಗವಿಕಲರಾಗಿದ್ದಾರೆ. ಇದುವರೆಗೂ ನೂರಾರು ಕೋಟಿ ರೂಪಾಯಿನಷ್ಟು ಬೆಳೆ ನಷ್ಟವಾಗಿದ್ದು ಸರ್ಕಾರ ಮಾತ್ರ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ವಿಫಲವಾಗುತ್ತಿವೆ.
ಕಾಡಾನೆ ಹಾವಳಿ ವಿರುದ್ಧ ಈ ಹಿಂದೆ ಕೂಡ ಸಾಕಷ್ಟು ಹೋರಾಟಗಳು ಪ್ರತಿಭಟನೆಗಳು ನಡೆಸಿದ್ದರು ಕೂಡ ಯಾವುದೇ ಫಲಪ್ರದವಾಗಿಲ್ಲ. ಆದರೆ ಈ ಬಾರಿಯ ನಮ್ಮ ಪ್ರತಿಭಟನೆ ವಿಭಿನ್ನವಾಗಿರುತ್ತದೆ. ಸರ್ಕಾರದ ಕಣ್ಣು ತೆರೆಸುವವರೆಗೂ ನಮ್ಮ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಹೋರಾಟದ ರೂಪುರೇಷೆಗಳ ಬಗ್ಗೆ ಹಳ್ಳಿ ಹಳ್ಳಿಗೆ ತೆರಳಿ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುವುದು ನಂತರ ವಿಧಾನಸೌಧ ಮುತ್ತಿಗೆ ಹಾಕಲಾಗುವುದೆಂದು ಮಾಹಿತಿ ನೀಡಿದ್ದಾರೆ.