ಸಕಲೇಶಪುರ: ತಾಲೂಕಿನ ಹಾನುಬಾಳ್ ಗ್ರಾಮದ ಗುಂಡು ಬ್ರಹ್ಮದೇವರ ಉದ್ದಿಜಾತ್ರೆ ಆದ್ದೂರಿಯಾಗಿ ಆರಂಭವಾಗಿದೆ.
ಹಾನುಬಾಳ್,ಮಕ್ಕಿಹಳ್ಳಿ,ಅಗನಿ ಗ್ರಾಮಸ್ಥರು ಶ್ರದ್ದಾ ಭಕ್ತಿಯಿಂದ ಆಚರಿಸುವ ಎರಡುದಿನಗಳ ಉದ್ದಿಜಾತ್ರೆಯ ಆರಂಭದ ದಿನವಾದ ಬುಧವಾರ ರಾತ್ರಿ ಮಕ್ಕಿಹಳ್ಳಿ, ಅಗನಿ, ಹಾನುಬಾಳ್ ದೇವಸ್ಥಾನಗಳಲ್ಲಿ ರಾತ್ರಿ ಕೆಂಡೋತ್ಸವ ನಡೆದಿದೆ. ಶನಿವಾರ ಅಗ್ನಿ ಹಾಗೂ ಮಕ್ಕಿಹಳ್ಳಿ ಗ್ರಾಮದಲ್ಲಿ ದೇವರನ್ನು ಅರಣ್ಯ ಮಾರ್ಗದ ಮುಖಾಂತರ ಗುಡ್ಡಕ್ಕೆ ಕೊಂಡೊಯ್ಯಲಾಗಿದ್ದು ಹಾನುಬಾಳ್ ಗ್ರಾಮದಲ್ಲಿ ದೇವರನ್ನು ವಿಶೇಷವಾಗಿ ಪೂಜಿಸಿ ಮೆರವಣಿಗೆ ಮುಖಾಂತರ ಗುಡ್ಡಕ್ಕೆ ತೆಗೆದುಕೊಂಡು ಹೋಗಲಾಯಿತು. ನಂತರ ಪೂಜೆ ವಿಧಿವಿಧಾನಗಳು ನಡೆದು ಸಾವಿರಾರು ಭಕ್ತಾಧಿಗಳು ಭಾಗಿಯಾಗಿದ್ದರು. ಸಂಜೆಯ ವೇಳೆಗೆ ಮೂರು ಗ್ರಾಮಗಳ ನಡುವೆ ಎತ್ತರದ ಬಿದಿರಿನ ಪೈಪೋಟಿ ನಡೆಯಲಿದೆ.