ಭಾರಿ ಶಬ್ದದ ಪಟಾಕಿ ಸಿಡಿಸಬೇಡಿ ಕರವೇ ತಾ. ಅಧ್ಯಕ್ಷ ರಮೇಶ್ ಮನವಿ.
ಅರಣ್ಯ ಇಲಾಖೆ ಜಾಗೃತಿ ಮೂಡಿಸುವಂತೆ ಸಲಹೆ.
ಸಕಲೇಶಪುರ :- ಸಕಲೇಶಪುರ ತಾಲ್ಲೂಕಿನ ಬಹು ಭಾಗಗಳಲ್ಲಿ ಕಾಡಾನೆಗಳಿದ್ದು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಿಡಿಸುವ ಪಟಾಕಿ ಶಬ್ದದಿಂದ ಕಾಡಾನೆಗಳು ವಿಚಲಿತವಾಗುವ ಸಂಭವವಿದ್ದು ಭಾರಿ ಶಬ್ದ ಮಾಡುವ ಪಟಾಕಿ ಸಿಡಿಸದಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಮನವಿ ಮಾಡಿದ್ದಾರೆ.
ಈ ಕುರಿತು ವಲಯ ಅರಣ್ಯ ಅಧಿಕಾರಿ ಶಿಲ್ಪ ಅವರೊಂದಿಗೆ ಮಾತನಾಡಿ, ಅರಣ್ಯ ಇಲಾಖೆಯ ವಾಹನದ ಧ್ವನಿವರ್ಧಕದ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪಟಾಕಿ ಶಬ್ದದಿಂದ ಕಾಡಾನೆಗಳು ಕಾಫಿ ತೋಟ ಕಾಡುಗಳಲ್ಲಿ ಇರುವ ವೇಳೆ ಶಬ್ದದಿಂದ ವಿಚೇಲಿತರಾಗಿ ವಾಸ್ತಿ ಪ್ರದೇಶಕ್ಕೆ ದಾಳಿ ಇಡುವ ಸಾಧ್ಯತೆಯಿದ್ದು ಇದರಿಂದ ಸಾವು ನೋವುಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ದೀಪಾವಳಿ ಸಂದರ್ಭದಲ್ಲಿ ಬಾರಿ ಶಬ್ದ ಮಾಡುವ ಪಟಾಕಿಗಳು ಹಚ್ಚಿ ಕಾಡು ಪ್ರಾಣಿಗಳ ಸಂಕುಲಕ್ಕೆ ತೊಂದರೆ ಮಾಡದಂತೆ ನಮ್ಮ ವಾಹಿನಿಯ ಮೂಲಕ ಮನವಿ ಮಾಡಿದ್ದಾರೆ.