ಆಲೂರು : 3 ಬಾರಿ ಶಾಸಕರಾದರೂ ಸಕಲೇಶಪುರ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ಕಡೆಗಣಸಿದ್ದು ಹೆಚ್ಚು ಮತ ನೀಡಿ ಮೂರನೇ ಬಾರಿ ಆಯ್ಕೆಗೆ ಕಾರಣರಾದ ಕಟ್ಟಾಯ ಹೋಬಳಿಯನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಸಕಲೇಶಪುರ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜು ಅಸಮಾಧಾನ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆ ಕಟ್ಟಾಯ ಹೋಬಳಿ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ಶೆಟ್ಟಿಹಳ್ಳಿ ಯಿಂದ ಕಟ್ಟಾಯ ಮಾರ್ಗದ ರಸ್ತೆ ಕೆಸರು ಗದ್ದೆಯಾಗಿದ್ದು, ವಾಹನ ಚಾಲಕರು ಹರಸಾಹಸ ಪಡಬೇಕಾಗಿದೆ.ಇದರಿಂದ ವಿದ್ಯಾರ್ಥಿಗಳು,ರೈತರು, ಜನಸಾಮಾನ್ಯರು ಓಡಾಡುವುದೇ ದುಸ್ಸಾಹಸವಾಗಿದೆ. ಕಟ್ಟಾಯ ಕ್ಷೇತ್ರದ ಜನತೆಯ ಆಶಿರ್ವಾದದಿಂದ ಗೆಲುವಿನ ನಗೆಬೀರಿದ ಶಾಸಕ ಹೆಚ್. ಕೆ ಕುಮಾರಸ್ವಾಮಿ ಈ ಹೋಬಳಿಯ ಕಡೆ ತಲೆಹಾಕಿಯು ಮಲಗುತ್ತಿಲ್ಲ. ಕಟ್ಟಾಯ ಹೋಬಳಿ ಅಭಿವೃದ್ಧಿ ಮರಿಚೀಕೆಯಾಗಿದೆ. ಶೆಟ್ಟಿಹಳ್ಳಿಯಿಂದ ಹಾಸನದ ರಸ್ತೆಯು ಗುಂಡಿಮಯವಾಗಿದ್ದು, ಸ್ವಲ್ಪ ದೂರ ರಸ್ತೆ ಇದ್ದರೂ ಕಳಪೆ ಗುಣಮಟ್ಟದ್ದಾಗಿದೆ. ಶೆಟ್ಟಿಹಳ್ಳಿಯಿಂದ ಕಟ್ಟಾಯ ಮಾರ್ಗದ ಬಸ್ ಸಂಚಾರವನ್ನು ಕೆ.ಎಸ್.ಆರ್.ಟಿ.ಸಿ ನಿಲ್ಲಿಸಿರುವುದು ಇದಕ್ಕೆ ತಾಜ ಉದಾಹರಣೆಯಾಗಿದೆ. ಪ್ರತಿಭಟನೆ ನಡೆಯುವ ಇಂದಿನ ದಿನ ಸಂಜೆ ರಸ್ತೆ ಗುದ್ದಲಿ ಪೂಜೆ ಮಾಡಿ ಜನರ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಇದನ್ನು ತಿಳಿಯದಷ್ಟು ಜನರು ಮೂರ್ಖರಾಗಿಲ್ಲ. ಶೀಘ್ರದಲ್ಲಿಯೇ ಕಟ್ಟಾಯ ಹೋಬಳಿ ರಸ್ತೆಗಳನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಕೃತಿ ವಿಕೋಪ ಅನುದಾನದಲ್ಲಿ ಭ್ರಷ್ಟಾಚಾರ : ಕಳೆದ ಹಲವು ದಿನಗಳಿಂದ ಬಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ರಸ್ತೆ ಕೆಲವು ಸೇತುವೆಗಳು ಸಂಪೂರ್ಣವಾಗಿ ಹಾಳಾಗಿ ಹೋಗಿರುವುದರಿಂದ ಸರ್ಕಾರ ದುರಸ್ತಿಪಡಿಸುವ ಸಲುವಾಗಿ ಸಾಕಷ್ಟು ಹಣ ಬಿಡುಗಡೆ ಮಾಡಿದೆ ಅದರೆ ಶಾಸಕರು ಹಣ ಹೊಡೆಯುವ ದೃಷ್ಟಿಯಿಂದ ಅವಶ್ಯವಿರುವ ಕಡೆ ಕಾಮಗಾರಿ ಮಾಡದೇ ಬೆಂಬಲಿಗರ ಮೂಲಕ ಬೇಡವಾದ ಕಡೆ ಕಾಮಗಾರಿ ಮಾಡಿ ಹಣ ಲೂಟಿ ಹೊಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ ಜನಪ್ರತಿನಿದಿಗಳು ಇವತ್ತು ಇರುತ್ತಾರೆ ನಾಳೆ ಹೋಗುತ್ತಾರೆ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಇಲ್ಲದಿದ್ದರೆ ಅಧಿಕಾರಿಗಳು ಉತ್ತರ ಕೋಡಬೇಕು ಎಂದು ಎಚ್ಚರಿಸಿದರು.
ಆಲೂರು-ಸಕಲೇಶಪುರ-ಕಟ್ಟಾಯ ಮಂಡಲದ ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜು ಮಾತನಾಡಿ, 3ಬಾರಿ ಸತತವಾಗಿ ಶಾಸಕರಾಗಿರುವ ಕುಮಾರಸ್ವಾಮಿಯವರು ನಿಷ್ಪ್ರಯೋಜಕ ಶಾಸಕರಾಗಿದ್ದು, ಆಲೂರು- ಸಕಲೇಶಪುರ, ಕಟ್ಟಾಯ ಕ್ಷೇತ್ರದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಸಾರ್ವಜನಿಕರು ಇಡಿ ಶಾಪ ಹಾಕುತ್ತಿದ್ದಾರೆ. ಇದನ್ನು ಮನಗಂಡು ಸ್ಥಳೀಯ ನಾಯಕರಾದ ಸಿಮೆಂಟ್ ಮಂಜುರವವರನ್ನು ಬೆಂಬಲಿಸಿ ಅಧಿಕಾರಕ್ಕೆ ತಂದರೆ ಮಾದರಿ ಕ್ಷೇತ್ರವನ್ನಾಗಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿದರು.
ಬಿಜೆಪಿ ಹಿರಿಯ ಮುಖಂಡ ವಿಶ್ವನಾಥ್ ಮಾತನಾಡಿ ಕಳೆದ ಬಾರಿ ಚುನಾವಣೆಯಲ್ಲಿ ಶಾಸಕ ಕುಮಾರಸ್ವಾಮಿಗೆ ಅವರಿಗೆ ಕಟ್ಟಾಯ ಹೋಬಳಿ ಸಂಪೂರ್ಣ ಬೆಂಬಲ ನೀಡಿದ್ದರಿಂದಲೇ ಸ್ವಲ್ಪ ಮತಗಳ ಅಂತರದಲ್ಲಿ ಗೆಲುವು ಪಡೆದು ಮೂರನೇ ಬಾರಿ ಶಾಸಕರಾದರೂ ಅದರೆ ಕುಮಾರಸ್ವಾಮಿ ಕಟ್ಟಾಯ ಹೋಬಳಿಯನ್ನು ನಿರ್ಲಕ್ಷ್ಯಸಿದ್ದಾರೆ ಮುಂದಿನ ಚುನಾವಣೆಯಲ್ಲಿ ಕಟ್ಟಾಯ ಹೋಬಳಿ ಜನ ಏನೆಂದು ತೋರಿಸಿಕೊಡಲಿದ್ದಾರೆ ಶೆಟ್ಟಿಹಳ್ಳಿಯಿಂದ ಕಟ್ಟಾಯದವರೆವಿಗೂ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಈ ಬಗ್ಗೆ ಬಿಜೆಪಿ ಮೂರು ದಿನಗಳ ಹಿಂದೆ ಪ್ರತಿಭಟನೆ ಮಾಡುವ ಬಗ್ಗೆ ಎಚ್ಚರಿಕೆ ನೀಡಿತ್ತು ಶಾಸಕ ಕುಮಾರಸ್ವಾಮಿ ಹದಿನೈದು ವರ್ಷಗಳಿಂದ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದು ಪ್ರತಿಭಟನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇದ್ದಕ್ಕಿದ್ದಂತೆ ಬಂದು ಗುದ್ದಲಿ ಪೂಜೆ ಮಾಡಿ ಹೋಗಿದ್ದಾರೆ ಇದು ಭಾಗದ ಜನರಿಗೆ ಮಾಡಿದ ಅಪಮಾನ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿ.ಜೆ.ಪಿ ಮುಖಂಡರಾದ ಜಿಲ್ಲಾ ಯುವ ಬಿ.ಜೆ.ಪಿ ಮೋರ್ಚಾ ಅಧ್ಯಕ್ಷ ಅನೂಪ್ ರಾಜ್,ಜಿಲ್ಲಾ ಬಿಜೆಪಿ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಅಮೃತ,ಅಜಿತ್ ಚಿಕ್ಕಕಣಗಾಲು, ಲೊಕೇಶ್ ಕಣಗಾಲು, ಹನುಮಂತೇಗೌಡ, ಗಣೇಶ್, ನಾಗಣ್ಣ, ಮೋಹನ್, ಕಿರಣ್ ಶೆಟ್ಟಿಹಳ್ಳಿ, ವಿಶ್ವನಾಥ್ ಬಳ್ಳೆಕೆರೆ, ಕಲ್ಲಹಳ್ಳಿ ವಿಶ್ವನಾಥ್, ಯೋಗಣ್ಣ ಮುಟ್ಟನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.