ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ಹೊಂಗಡಹಳ್ಳದಲ್ಲಿ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ಶ್ರೀ ರಾಮಾಂಜನೇಯ ಜಾತ್ರಾ ಮಹೋತ್ಸವ ನಡೆಯಿತು. ಕೋವಿಡ್ ಹಿನ್ನೆಲೆಯಲ್ಲಿ ಕಳೆದ 2 ವರ್ಷ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ದೇವಸ್ಥಾನ ದಿಂದ ಹಿಂದಿನ ದಿನ ಗುಡ್ಡಕ್ಕೆ ದೇವರನ್ನು ಕರೆದು ಕೊಂಡು ಪೂಜೆ ನೆರವೇರಿಸಿ ಮಾರನೆಯ ದಿನ ಬೆಳಗ್ಗೆ ದೇವರ ಉತ್ಸವ ಮೂರ್ತಿಯನ್ನು ಊರಿನ ತುಂಬಾ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಸಂದರ್ಭದಲ್ಲಿ ಗ್ರಾಮಸ್ಥರು ಅವರ ಅವರ ಕುಟುಂಬ ಸದಸ್ಯರೊಂದಿಗೆ ಈಡುಗಾಯಿ , ಪಟಾಕಿ ಸಿಡಿಸಿ ಸಂಭ್ರಮಿಸಿದರೆ ಸ್ವತಃ ಬಂದೂಕು ಹೊಂದಿರುವವರು ಆಕಾಶಕ್ಕೆ ಕುಶಾಲ ತೋಪು ಸಿಡಿಸಿ ಸಂಭ್ರಮಿಸಿದರ. ಕುದುರೆ ಮೇಲೆ ಕುಳಿತಿರುವ ಶ್ರೀ ರಾಮನ ಮೂರ್ತಿ ಮೆರವಣಿಗೆ ಮುಖಾಂತರ ಜಾತ್ರೆ ಮೈದಾನದ ಕಟ್ಟೆಯಲ್ಲಿ ಕೂರಿಸಿ ಸಾರ್ವಜನಿಕರಿಗೆ ಉತ್ಸವ ಮೂರ್ತಿ ದರ್ಶನ ಭಾಗ್ಯ ಕರುಣಿಸಿ ಪ್ರಸಾದ ವಿತರಿಸಲಾಯಿತು.