Sunday, November 24, 2024
Homeಸುದ್ದಿಗಳುಸಕಲೇಶಪುರಕೂಲಿ ಕಾರ್ಮಿಕನ ಮೇಲೆ ಒಂಟಿ ಕಾಡಾನೆ ದಾಳಿ : ತೀವ್ರ ನಿಗಾ ಘಟಕದಲ್ಲಿ ಗಾಯಳುವಿಗೆ ಚಿಕಿತ್ಸೆ

ಕೂಲಿ ಕಾರ್ಮಿಕನ ಮೇಲೆ ಒಂಟಿ ಕಾಡಾನೆ ದಾಳಿ : ತೀವ್ರ ನಿಗಾ ಘಟಕದಲ್ಲಿ ಗಾಯಳುವಿಗೆ ಚಿಕಿತ್ಸೆ

ಸಕಲೇಶಪುರ : ಕೂಲಿ ಕೆಲಸಕ್ಕೆ ತರೆಳುತ್ತಿದ್ದವನ ಮೇಲೆ ಕಾಡಾನೆ ದಾಳಿ. ಕಾಡಾನೆ ತುಳಿತದಿಂದ ವ್ಯಕ್ತಿಯ ಕಾಲು ಮುರಿತ. ಗಾಯಾಳುವಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ. ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ತಂಡ ಭೇಟಿ, ಪರಿಶೀಲನೆ.

ಕೂಲಿ ಕೆಲಸಕ್ಕೆ ತರೆಳುತ್ತಿದ್ದವನ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಕಾಲಿನಿಂದ ತುಳಿದು ವ್ಯಕ್ತಿಯ ಕಾಲು ಮುರಿದಿರುವ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ವಾಟೆಹಳ್ಳ ಗ್ರಾಮದಲ್ಲಿ ನಡೆದಿದೆ. ದಿವಾಕರ್ ಶೆಟ್ಟಿ (60) ಕಾಡಾನೆ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಇಂದು ಬೆಳಿಗ್ಗೆ ದಿವಾಕರ್ ಶೆಟ್ಟಿ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಕಾಡಾನೆ ಕಾಲಿನಿಂದ ತುಳಿದಿದೆ. ಕಾಡಾನೆ ತುಳಿತದಿಂದ ದಿವಾಕರ್ ಅವರ ಬಲಗಾಲು ಮುರಿತವಾಗಿದ್ದು ಕಿರಿಚಾಡುತ್ತಿದ್ದಂತೆ ಕಾಡಾನೆ ಕಾಫಿ ತೋಟದೊಳಗೆ ಹೋಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಾಫಿ ತೋಟದಲ್ಲಿ ಕಾಡಾನೆ ಬೀಡುಬಿಟ್ಟಿದ್ದು ಜೀವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಕೂಲಿ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ.

RELATED ARTICLES
- Advertisment -spot_img

Most Popular