Saturday, April 19, 2025
Homeಕ್ರೈಮ್ನಾಲ್ವರು ಬಾಲಕರು ನೀರು ಪಾಲು ಪ್ರಕರಣ : ಘಟನಾ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ

ನಾಲ್ವರು ಬಾಲಕರು ನೀರು ಪಾಲು ಪ್ರಕರಣ : ಘಟನಾ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ

ನಾಲ್ವರು ಬಾಲಕರು ನೀರು ಪಾಲು ಪ್ರಕರಣ : ಘಟನಾ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ 

ಆಲೂರು : ಕೆರೆಯಲ್ಲಿ ಈಜಲು ಹೋಗಿದ್ದ ಐವರ ಪೈಕಿ ನಾಲ್ವರು ಬಾಲಕರು ನೀರು ಪಾಲಾದ ಘಟನೆ ಆಲೂರು ತಾಲ್ಲೂಕಿನ ಕದಾಳು ಸಮೀಪದ ಮುತ್ತಿಗೆಯಲ್ಲಿ ನಡೆದಿದೆ.

 ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶಾಸಕ ಸಿಮೆಂಟ್ ಮಂಜು ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಇದೆ ವೇಳೆ ಬಾಲಕರ ಪೋಷಕರಿಗೆ ಸಾಂತ್ವನ ಹೇಳಿದರು. ಶಾಸಕರು ಘಟನಾ ಸ್ಥಳದಲ್ಲಿ ಭಾವುಕರಾಗಿದ್ದು ಕಂಡು ಬಂದಿತು.ಬಾಲಕರ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಮುತ್ತಿಗೆ ಜೀವನ್(13), ಸಾತ್ವಿಕ್(11), ವಿಶ್ವ ಹಾಗೂ ಪೃಥ್ವಿ (12) ಮೃತ ಬಾಲಕರು. ಚಿರಾಗ್ (10) ಬದುಕುಳಿದಿದ್ದು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲೆಗೆ ರಜೆ ಇರುವುದರಿಂದ ಈಜಲು ಹೋಗಿದ್ದ ಮಕ್ಕಳು ಒಬ್ಬರನ್ನೊಬ್ಬರು ರಕ್ಷಿಸುವ ಯತ್ನದಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಶವಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

RELATED ARTICLES
- Advertisment -spot_img

Most Popular