ಬಿಸಿಲಿನ ತಾಪಕ್ಕೆ ತೆಂಗಿನ ಮರದ ಮೇಲೆ ಪ್ರಜ್ಞೆ ತಪ್ಪಿದ ಯುವಕ
ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಯುವಕನ ರಕ್ಷಣೆ.
ಸಕಲೇಶಪುರ : ತೆಂಗಿನ ಮರದ ಸುಳಿ ಕಡಿಯಲು ಮರದೆ ಮೇಲೆ ಹತ್ತಿದ್ದ ಯುವಕ ಮರದ ಮೇಲೆಯೇ ಪ್ರಜ್ಞೆ ತಪ್ಪಿದ ಘಟನೆ ನೆಡೆದಿದೆ.
ನಗರದ ಹೊರ ವಲಯದ ಕೊಲ್ಲಹಳ್ಳಿಯ ಮಂಜು ಎಂಬುವವರಿಗೆ ಸೇರಿದ ತೆಂಗಿನ ಮರದ ಸುಳಿಗಳನ್ನು ಕತ್ತರಿಸಲು ತೆರಳಿದ್ದ ಹಲಸುಲಿಗೆ ಗ್ರಾಮದ ಕಾರ್ಮಿಕ ನವೀನ್ ಪ್ರಜ್ಞೆ ತಪ್ಪಿದ್ದಾರೆ.ಈ ವೇಳೆ ಸುಳಿಗಳನ್ನು ಕತ್ತರಿಸುವ ವೇಳೆ ನವೀನ್ ಗೆ ತಲೆ ಸುತ್ತು ಹಾಗೂ ಎಡಗೈ ನೋವು ಬಂದಿದೆ.ತೆಂಗಿನ ಮರದಿಂದ ಕೆಳಗೆ ಇಳಿಯಲಾಗದೆ ಮರದ ಮೇಲೆಯೇ ಪ್ರಜ್ಞೆ ತಪ್ಪಿದ್ದಾರೆ. ಈ ಸಂಧರ್ಭದಲ್ಲಿ ಮರದ ಮೇಲೆ ಪ್ರಜ್ಞೆ ತಪ್ಪಿರುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಏಣಿಯ ಸಹಾಯದಿಂದ ಮರದ ಮೇಲೆ ಹತ್ತಿ ಯುವಕನನ್ನು ರಕ್ಷಣೆ ಮಾಡಿದ್ದಾರೆ.
ಈ ವೇಳೆ ಅಗ್ನಿಶಾಮಕ ದಳದ ಠಾಣಾಧಿಕಾರಿ ಪ್ರತೀಕ್ ತಹಸೀಲ್ದಾರ್,ಸಹಾಯಕ ಠಾಣಾಧಿಕಾರಿ ರಾಜು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.