Saturday, April 19, 2025
Homeಸುದ್ದಿಗಳುಸಕಲೇಶಪುರನಾಳೆ ತೆಂಕಲಗೂಡು ಮಠದಲ್ಲಿ ಧಾರ್ಮಿಕ ಸಮ್ಮೇಳನ ರಂಭಾಪುರಿ ಶ್ರೀಗಳ ಉಪಸ್ಥಿತಿಯಲ್ಲಿ ಹಲವು ಕಾರ್ಯಕ್ರಮ ಆಯೋಜನೆ

ನಾಳೆ ತೆಂಕಲಗೂಡು ಮಠದಲ್ಲಿ ಧಾರ್ಮಿಕ ಸಮ್ಮೇಳನ ರಂಭಾಪುರಿ ಶ್ರೀಗಳ ಉಪಸ್ಥಿತಿಯಲ್ಲಿ ಹಲವು ಕಾರ್ಯಕ್ರಮ ಆಯೋಜನೆ

ನಾಳೆ ತೆಂಕಲಗೂಡು ಮಠದಲ್ಲಿ ಧಾರ್ಮಿಕ ಸಮ್ಮೇಳನ

ರಂಭಾಪುರಿ ಶ್ರೀಗಳ ಉಪಸ್ಥಿತಿಯಲ್ಲಿ ಹಲವು ಕಾರ್ಯಕ್ರಮ ಆಯೋಜನೆ 

ಸಕಲೇಶಪುರ :ತಾಲೂಕಿನ ಯಸಳೂರಿನ ತೆಂಕಲಗೂಡು ಬೃಹನ್ಮಠದಲ್ಲಿ ನಾಳೆ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತೆಂಕಲಗೂಡು ಮಠದ ಶ್ರೀಗಳಾದ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.

ಶುಕ್ರವಾರ ಮುಂಜಾನೆ ಬ್ರಾಹ್ಮೀ ಮುಹರ್ತದಲ್ಲಿ ವಿರಾಮಹೇಶ್ವರ ಜಂಗಮ ವಟುಗಳಿಗೆ ಶಿವದೀಕ್ಷೆ ಕಾರ್ಯಕ್ರಮ. ನಂತರ ಲಿಂಗೈಕ್ಯ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆ ಮಹಾ ರುದ್ರ ಅಭಿಷೇಕ ನಡೆಯಲಿದೆ.7 ಗಂಟೆಗೆ ನಂದೀಶ್ವರ ದೇವಸ್ಥಾನದಲ್ಲಿ ಗಂಗಾ ಪೂಜೆ ನೆರವೇರಿಸಿ ನಂದಿದ್ವಜ ಸೇರಿದಂತೆ ಕಲಾತಂಡಗಳಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ. ಲೋಕಕಲ್ಯಾಣಾರ್ಥಕವಾಗಿ ಬೆಳಗ್ಗೆ 8:00 ಗಂಟೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ ನಡೆಯಲಿದೆ. ನಂತರ 12 ಗಂಟೆಗೆ ರಂಭಾಪುರಿ ಶ್ರೀಗಳ ಉಪಸ್ಥಿತಿಯಲ್ಲಿ ಧರ್ಮ ಸಮ್ಮೇಳನ ಜರುಗಲಿದೆ ಎಂದು ತೆಂಕಲಗೋಡು ಮಠದ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದ್ದಾರೆ.

RELATED ARTICLES
- Advertisment -spot_img

Most Popular