ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿಗರ ವಶಕ್ಕೆ
ಸಕಲೇಶಪುರ : ತಾಲೂಕಿನ ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಬೆಂಬಲಿಗರ ಪಾಲಾಗಿರುತ್ತದೆ. ಅಧ್ಯಕ್ಷರಾಗಿ ಕಿರ್ಕಳ್ಳಿ ಬಸವರಾಜ್, ಉಪಾಧ್ಯಕ್ಷರಾಗಿ ಶಾರದಾ ಕುಮಾರೇಗೌಡ ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಕಿರ್ಕಳ್ಳಿ ಬಸವರಾಜ್ ಮಾತನಾಡಿ ಶಾಸಕ ಸಿಮೆಂಟ್ ಮಂಜು ಮಾರ್ಗದರ್ಶನದಲ್ಲಿ ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘವನ್ನು ಮಾದರಿ ಕೃಷಿ ಪತ್ತಿನ ಸಂಘವಾಗಿ ಮಾಡಲಾಗುವುದು ಎಂದರು.
ಬಿಜೆಪಿ ಮುಖಂಡ ವಳಲಹಳ್ಳಿ ಅಶ್ವಥ್ ಮಾತನಾಡಿ ಶಾಸಕ ಸಿಮೆಂಟ್ ಮಂಜುರವರ ಮಾರ್ಗದರ್ಶನದಲ್ಲಿ ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘವನ್ನು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬಲಿಷ್ಠಗೊಳಿಸುವುದರಲ್ಲಿ ಅನುಮಾನವಿಲ್ಲ, ಮೊನ್ನೆ ತಾನೇ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಯಿಂದಲೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಆಯ್ಕೆಯಾಗಿರುತ್ತಾರೆ. ಇದು ಹೆತ್ತೂರು ಬಾಗದಲ್ಲಿ ಪಕ್ಷ ಮತ್ತಷ್ಟ್ಟು ಬಲವರ್ಧನೆಯಾಗುತ್ತಿರುವ ಸಂಕೇತವಾಗಿದೆ ಎಂದರು.
. ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಸಹೋದರ ಯೋಗೇಶ್, ಹೆತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಮಹೇಶ್, ಮಾಜಿ ಉಪಾಧ್ಯಕ್ಷ ಪ್ರಸನ್ನ, ಗ್ರಾಮ ಪಂಚಾಯತಿ ಸದಸ್ಯ ಡಿಲಾಕ್ಷಾ,ವಳಲಹಳ್ಳಿ ಸುದರ್ಶನ್. ಮುಂತಾದವರು ಹಾಜರಿದ್ದರು.