ದೇವರ ಮೆರವಣಿಗೆ ವೇಳೆ ದಲಿತ ಸಮುದಾಯದ ಬಾಲಕ ದೇವರ ಮೂರ್ತಿ ಮುಟ್ಟಿದನೆಂದು ಆ ಬಾಲಕನ ಕುಟುಂಬಕ್ಕೆ ದಂಡ ವಿಧಿಸಲಾಗಿದೆ. ಕೋಲಾರದ ಮಾಲೂರಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ 10 ದಿನಗಳ ಹಿಂದೆ ಭೂತಮ್ಮ ದೇವರ ಮೂರ್ತಿ ಮೆರವಣಿಗೆ ವೇಳೆ 15 ವರ್ಷದ ಬಾಲಕ ಚೇತನ್ ದೇವರ ಮೂರ್ತಿ ಮುಟ್ಟಿದ್ದಾನೆ. ದಲಿತರು ಮೂರ್ತಿ ಮುಟ್ಟಿದ್ದಕ್ಕೆ ಮೈಲಿಗೆಯಗಿದೆ. ಇನ್ನೊಮ್ಮೆ ಬಣ್ಣ ಬಳಿಸಬೇಕು.
ಹೀಗಾಗಿ ದಂಡ ಕಟ್ಟಿ ಎಂದು ಗ್ರಾಮಸ್ಥರು ಆತನ ತಂದೆ ರಮೇಶ್ ಹಾಗೂ ತಾಯಿ ಶೋಭಾಗೆ ಈ ದಂಡ ವಿಧಿಸಲಾಗಿದೆ.
ನೊಂದ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.