ಹಾಸನ ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಭೂಮಿಯನ್ನು ಕಬಳಿಸುವ ಯತ್ನ ನಡೆಯುತ್ತಿದ್ದು ಇದರ ಹಿಂದೆ ಇದ್ದ ಜಿಲ್ಲಾಧಿಕಾರಿ ಒಬ್ಬ ಕಳ್ಳ ಇದ್ದ ಎಂದು ಮಾಜಿ ಸಚಿವ ರೇವಣ್ಣ ಹರಿಹಾಯ್ದಿದ್ದಾರೆ.
ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಹಾಗೂ ಶಾಸಕರು ಮೀಸಲಿರಿಸಿದ ಭೂಮಿ ಫಲವತ್ತಾದದ್ದು. ಅಷ್ಟು ಜಾಗದ ಅವಶ್ಯಕತೆ ಇಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈಗ ಬೆಂಗಳೂರಿಗೆ ಹೋಗಿರುವ ಹಾಸನದ ಜಿಲ್ಲಾಧಿಕಾರಿ ಒಬ್ಬ ಕಳ್ಳ ಇಲ್ಲಿ ಹನ್ನೊಂದು ಎಕರೆ ಜಾಗ ನುಂಗಿ 250 ಎಕರೆ ಹೊಡೆಯಲು ಹೊರಟ್ಟಿದ್ದಾನೆ. ಅವನು ಸರಿ ಇಲ್ಲ ಖರಾಬು.
ಅವನನ್ನು ಜಿಲ್ಲಾಧಿಕಾರಿಯಾಗಿ ನೇಮಿಸಿದವರಿಗೆ ಪ್ರಶಸ್ತಿ ಕೊಡಬೇಕು. ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರ್ ಲೈಸೆನ್ಸ್ ಕೊಡಲಾಗಿದ್ದು ಒಂದು ಲೈಸೆನ್ಸ್ಗೆ 50 ಲಕ್ಷ ಲಂಚ ಪಡೆದಿದ್ದಾರೆ. ಈಗ ಅವನನ್ನು ಬೆಂಗಳೂರಿನ ಕೆ.ಐ.ಎ.ಡಿ.ಬಿ.ಯಲ್ಲಿ ಕೂರಿಸಿದ್ದಾರೆ . ಅವನು ಎಲ್ಲಿ ಹೋಗುತ್ತಾನೆ. ನನ್ನ ಕೈಗೆ ಸಿಗದೆ ಎಲ್ಲಿ ಹೋಗುತ್ತಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.