ಸಕಲೇಶಪುರ: ಕ್ರೀಡಾಪಟುಗಳು ದೇಶದ ಆಸ್ತಿ ಎಂದು ಪುರಸಭೆ ಅಧ್ಯಕ್ಷ ಕಾಡಪ್ಪ ಹೇಳಿದರು.
ಪಟ್ಟಣದ ಸುಬಾಷ್ ಮೈದಾನದಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ,ಮಾನಸೀಕವಾಗಿ ಆರೋಗ್ಯವಂತರಾಗಲು ಸಾದ್ಯ. ಇಂದು ಕ್ರೀಡೆಗೆ ಉಜ್ವಲ ಭವಿಷ್ಯವಿದ್ದು ಕ್ರೀಡೆಯ ಮೂಲಕ ಬಧುಕು ಕಟ್ಟಿಕೊಳ್ಳುವಂತ ವಾತವಾರಣ ಇಂದು ನಿರ್ಮಾಣವಾಗಿದೆ. ಆದ್ದರಿಂದ, ಕ್ರೀಡೆಯಲ್ಲಿ ತೆರೆದಮನಸ್ಸಿನಿಂದ ಪಾಲ್ಗೊಳ್ಳುವ ಮೂಲಕ ಸ್ಪರ್ದೇ ಮಾಡಬೇಕು. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಶಿವಾನಂದ್ ಮಾತನಾಡಿ, ಶಿಕ್ಷಕರು ಶಾಲಾ ಹಂತದಲ್ಲೆ ವಿದ್ಯಾರ್ಥಿಗಳನ್ನು ಕ್ರೀಡೆಯೆಡೆಗೆ ಆಶಕ್ತಿ ಮೂಡುವಂತೆ ಮಾಡಬೇಕು ಇದರಿಂದ ವಿದ್ಯಾರ್ಥಿ ದೈಹಿಕ ಹಾಗೂ ಮಾನಸೀಕವಾಗಿ ಬಲಿಷ್ಠಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಕ್ರೀಡಾಕೂಟದಲ್ಲಿ ಪಟ್ಟಣದ ಸಂತಜೋಸೆಫರ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಗೆ ಭಾಜನರಾದರು. ತಾಲೂಕು ಕ್ರೀಡಾಕೂಟದಲ್ಲಿ ಸಂತಜೋಸೆಫರ ಶಾಲೆಯ ವಿದ್ಯಾರ್ಥಿನಿ ಸ್ನೇಹ ನೂರು ಹಾಗೂ ಇನ್ನೂರು ಮೀಟರ್ ಓಟದಲ್ಲಿ ಪ್ರಥಮ, ಅದೇ ಶಾಲೆಯ ಶೀಲ್ಪ ಎಂಬ ವಿದ್ಯಾರ್ಥಿನಿ ರೀಲೆಯಲ್ಲಿ ಪ್ರಥಮ ಸ್ಥಾನಪಡೆದರೆ,ಬಾಲಕರ ವಿಭಾಗದ ನಾಲ್ಕುನೂರು ಓಟದಲ್ಲಿ ಗಿರೀಶ್ ಪ್ರಥಮ ಸ್ಥಾನ ಹಾಗೂ ವಾಲಿಬಾಲ್ ಹಾಗೂ ಥ್ರೂಬಾಲ್‌ನಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಕೂಟದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್, ಕಾರ್ಯಧರ್ಶಿ ಧೋರೇಶ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಕುಶ್ವಂತ್ ಮುಂತಾದವರಿದ್ದರು.