Sunday, April 13, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಕಾಲಿನ ಸ್ವಾದಿನವನ್ನು ಕಳೆದು ಕೊಂಡ ವ್ಯಕ್ತಿಗೆ ಸಹಾಯ ಹಸ್ತ ಚಾಚಿದ ಜಿಪಂ ಮಾಜಿ...

ಸಕಲೇಶಪುರ : ಕಾಲಿನ ಸ್ವಾದಿನವನ್ನು ಕಳೆದು ಕೊಂಡ ವ್ಯಕ್ತಿಗೆ ಸಹಾಯ ಹಸ್ತ ಚಾಚಿದ ಜಿಪಂ ಮಾಜಿ ಸದಸ್ಯೆ ಚಂಚಲ ಕುಮಾರಸ್ವಾಮಿ

ಸಕಲೇಶಪುರ : ಸರಕಾರದ ವಿವಿಧ ಯೋಜನೆಗಳು ಶಾಸಕರ ಅನುದಾನದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಉಚ್ಚಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡಲಾಗಿದೆ ಎಂದು ಜಿಪಂ ಮಾಜಿ ಸದಸ್ಯೆ ಚಂಚಲ ಕುಮಾರಸ್ವಾಮಿ ಹೇಳಿದರು‌.
ತಾಲ್ಲೂಕಿ ಚಿಕ್ಕಂದೂರು ಗ್ರಾಮದಲ್ಲಿ ಮರದಿಂದ ಬಿದ್ದು ತಮ್ಮ ಕಾಲಿನ ಸ್ವಾದಿನವನ್ನು ಕಳೆದು ಕೊಂಡಿರುವ ಧರ್ಮ ಸಿ.ಜಿ ಎಂಬುವವರ ಮನೆಗೆ ಭೇಟಿ ನೀಡಿ ಧನ ಸಹಾಯ ಮಾಡಿದ ನಂತರ ಮಾತನಾಡಿ, ಶಾಸಕರು ಗ್ರಾಮಸ್ಥರ ಹಲವು ಬೇಡಿಕೆಗಳನ್ನು ಈಡೇರಿಸಿದ್ದಾರೆ, ಚಿಕ್ಕಂದೂರು ಗ್ರಾಮಕ್ಕೆ ಹೈ ಮಾಸ್ಕ್ ಬೀದಿ ದೀಪವನ್ನು ಸಹ ನೀಡಿದ್ದೇವೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳಿಗೆ ಸಿಗತಕ್ಕಂತ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವನಗೂರು ಗ್ರಾ.ಪಂ ಅಧ್ಯಕ್ಷರಾದ ಬೆಳ್ಳಿ ಗೌಡ, ಜೆಡಿಎಸ್ ಮುಖಂಡರುಗಳಾದ ಗೊದ್ದು ಕೌಶಿಕ್, ರಾಶಿ ಗೌಡ ಮತ್ತು ಸುಮನ್ ಗೌಡ ಸೇರಿದಂತೆ ಇನ್ನಿತರರು ಇದ್ದರು

RELATED ARTICLES
- Advertisment -spot_img

Most Popular