Sunday, November 24, 2024
Homeಸುದ್ದಿಗಳುಸಕಲೇಶಪುರವಿಶ್ವ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರಮೋದಿ ಕಾರಣ: ಶಾಸಕ ಸಿಮೆಂಟ್ ಮಂಜು

ವಿಶ್ವ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರಮೋದಿ ಕಾರಣ: ಶಾಸಕ ಸಿಮೆಂಟ್ ಮಂಜು

ವಿಶ್ವ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರಮೋದಿ ಕಾರಣ: ಶಾಸಕ ಸಿಮೆಂಟ್ ಮಂಜು

ಸಕಲೇಶಪುರ: ವಿಶ್ವ ಯೋಗ ದಿನಾಚರಣೆಯ ಆಚರಣೆಗೆ ಪ್ರಧಾನಿ ನರೇಂದ್ರಮೋದಿರವರು ಕಾರಣ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

  ಪಟ್ಟಣದ ರಾಘವೇಂದ್ರ ನಗರ ಬಡಾವಣೆಯಲ್ಲಿ ಯೋಗಚೇತನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಯೋಗದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ ಯೋಗದಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಸಾಧ್ಯ. ಯೋಗ ಮನುಷ್ಯನನ್ನು ಸಧೃಡವಾಗಿ ಮಾಡುತ್ತದೆ.  ಯೋಗದಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಿಂದೆ ಭಾರತಿಯರಿಗೆ ಮಾತ್ರ ಸೀಮಿತವಾಗಿದ್ದ ಯೋಗ ಇದೀಗ ಜಗತ್ತಿನ ವಿವಿಧ ದೇಶಗಳ ಜನರು ಯೋಗವನ್ನು ಅಭ್ಯಾಸಿಸಲು ಮುಂದಾಗಿದ್ದಾರೆ. ಇದಕ್ಕೆ ನಾನು ಪ್ರಧಾನಿ ನರೇಂದ್ರಮೋದಿರವರನ್ನು ಅಭಿನಂದಿಸುತ್ತೇನೆ ಎಂದರು.

  ಈ ಸಂಧರ್ಭದಲ್ಲಿ ಯೋಗಚೇತನ ಟ್ರಸ್ಟ್ ವತಿಯಿಂದ ಶಾಸಕರನ್ನು ಸನ್ಮಾನಿಸಿ ಹೂವಿನ ಗಿಡವನ್ನು ನೀಡಲಾಯಿತು.

  ಈ ಸಂಧರ್ಭದಲ್ಲಿ ಯೋಗಚೇತನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀರಂಗನಾಥ್, ಕಾರ್ಯದರ್ಶಿ ಜಗದೀಶ್, ಪದಾಧಿಕಾರಿಗಳಾದ ಲಕ್ಷ್ಮಣ್ ಕೀರ್ತಿ, ದಿನೇಶ್, ರುದ್ರೇಶ್, ಮಾಜಿ ಪುರಸಭಾ ಸದಸ್ಯರುಗಳಾದ ಮೋಹನ್, ನಿರ್ವಾಣಯ್ಯ, ಡಿಶ್ ಕೃಷ್ಣಮೂರ್ತಿ, ನವೀನ್ ಶೆಟ್ಟಿ, ವಿಜಯ್ ಕುಮಾರ್, ನಂದನ್ ಮುಂತಾದವರು ಹಾಜರಿದ್ದರು.

RELATED ARTICLES
- Advertisment -spot_img

Most Popular