Monday, November 25, 2024
Homeಸುದ್ದಿಗಳುಸಕಲೇಶಪುರಕರ್ನಾಟಕದಲ್ಲಿ ಕನ್ನಡವು ಹೆಸರಿಗೆ ಮಾತ್ರ ಆಡಳಿತ ಭಾಷೆಯಾಗಿದೆ- ಸಾಮಾಜಿಕ ಹೋರಾಟಗಾರ ಎಡೇಹಳ್ಳಿ ಆರ್ ಮಂಜುನಾಥ್ ವಿಷಾದ.

ಕರ್ನಾಟಕದಲ್ಲಿ ಕನ್ನಡವು ಹೆಸರಿಗೆ ಮಾತ್ರ ಆಡಳಿತ ಭಾಷೆಯಾಗಿದೆ- ಸಾಮಾಜಿಕ ಹೋರಾಟಗಾರ ಎಡೇಹಳ್ಳಿ ಆರ್ ಮಂಜುನಾಥ್ ವಿಷಾದ.

*ಕರ್ನಾಟಕದಲ್ಲಿ ಕನ್ನಡವು ಹೆಸರಿಗೆ ಮಾತ್ರ ಆಡಳಿತ ಭಾಷೆಯಾಗಿದೆ.*

 ಕನ್ನಡ ಆಡಳಿತ ಭಾಷೆ ಬಗ್ಗೆ ಐದು ದಶಕಗಳ ಹಿಂದೆಯೇ ದಿನಕರ ದೇಸಾಯಿ ಹೀಗೆ ಹೇಳಿದ್ದಾರೆ.

“ಕನ್ನಡಾಂಬೆಗೆ ಇವರು ಹಾಕುವರು ಹಾರ”..

“ಆಂಗ್ಲ ನುಡಿಯಲ್ಲಿ ನಡೆಸುವರು ಸರಕಾರ”..

“ಕೇಳಿದರೆ ಹೇಳುವರು ಸ್ವಲ್ಪದಿನ ತಾಳಿ”..

“ಆಮೇಲೆ ಕೂಗಲಿದೆ ಕನ್ನಡದ ಕೋಳಿ”.

 ಅ ಕನ್ನಡದ ಕೋಳಿ ಇನ್ನೂ ಕೂಗಲೀಲ್ಲ.

ಬದಲಾಗಿ ಸರಕಾರದ ನಿರ್ಲಕ್ಷತೆಯಿಂದ ಅದು ಸೊರಗಿ

ಸಾಯುವ ಸ್ಥಿತಿಯಲ್ಲಿದೆ.ನಮ್ಮ ಸರಕಾರದ ಆಡಳಿತ

ಸೂತ್ರ ಹಿಡಿದುಕೊಂಡ ಹಲವು ಜನ ಅಧಿಕಾರಿಗಳು

ಕನ್ನಡೇತರರು.ಅವರಿಗೆ ಕನ್ನಡದ ಬಗ್ಗೆ ಉದಾಸೀನತೆ,

ಕೇಂದ್ರ ಸರಕಾರದ ಕಚೇರಿಗಳಲ್ಲಿ ಆಯಾ ರಾಜ್ಯಗಳಲ್ಲಿ

ಆ ರಾಜ್ಯದ ಭಾಷೆಯಲ್ಲಿ ವ್ಯವಹರಿಸುತ್ತಾರೆ.ಆದರೆ

ಕರ್ನಾಟಕದಲ್ಲಿ ಕನ್ನಡವನ್ನು ಬಳಸುವುದಿಲ್ಲ.

ಕರ್ನಾಟಕದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ

ಕನ್ನಡವೆಂಬುದು ಸೊನ್ನೆಯಾಗಿದೆ,ಕಚೇರಿಗಳು

ಕಾರ್ಖಾನೆಗಳು ಅಂಗಡಿ ಮುಗ್ಗಟ್ಟುಗಳಲ್ಲಿ ಇಂಗ್ಲಿಷ್

ಭಾಷೆಯೇ ರಾರಾಜಿಸುತ್ತದೆ. ಕನ್ನಡಿಗರು ಇದನ್ನು ಸುಮ್ಮನೆ ಸಹಿಸಿಕೊಂಡು ಹೋಗುತ್ತಾರೆ.ಕಲಿಕಾ ಭಾಷಾ ಮಾಧ್ಯಮದ ಬಗ್ಗೆ ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯದ ತೀರ್ಪು ಕನ್ನಡಕ್ಕೆ ಮರಣಶಾಸನವಾಗಿದೆ.

 ಈ ವಿಷಯದಲ್ಲಿ ನಮ್ಮ ಸರಕಾರ

ಸರಿಯಾದ ವಾದ ಮಂಡಿಸುವಲ್ಲಿ ಸೋತಿದೆ.ಗಡ್ಡಕ್ಕೆ

ಬೆಂಕಿ ಹತ್ತಿದಾಗ ಬಾವಿ ತೋಡಲು ಹೋಗುವುದು

ನಮ್ಮ ಸರಕಾರದ ನೀತಿಯಾಗಿದೆ.ಪ್ರಾಥಮಿಕ ಹಂತದಲ್ಲಿ

ಮಾತೃಭಾಷೆಯೇ (ರಾಜ್ಯ ಭಾಷೆ ) ಕಲಿಕಾ

ಮಾಧ್ಯಮವಾಗಬೇಕು. ಅವಶ್ಯವೆನಿಸಿದರೆ ಶಾಸನಗಳನ್ನು

ತರಬೇಕು.ಸಂವಿಧಾನ ತಿದ್ದುಪಡಿಯಾಗಬೇಕು.ದೇಶೀ

ಭಾಷಾ ಶಾಸನವನ್ನು ತರಬೇಕು.ದೇಶೀ ಭಾಷಾ

ಮಾಧ್ಯಮ ರಾಷ್ಟ್ರೀಯ ನೀತಿ ಜಾರಿಗೆ ತರಬೇಕು.ಇದಕ್ಕೆ

ಸಂಘಟಿತವಾಗಿ ಹೋರಾಡಬೇಕು.

‘ಕನ್ನಡಕ್ಕೆ ಹೋರಾಡು ಕನ್ನಡದ ಕಂದ

ಕನ್ನಡವ ಕಾಪಾಡು ನನ್ನ ಆನಂದ’

ಕನ್ನಡ ಕವಿಯ ಈ ಆಶಯವನ್ನು ಪಾಲಿಸಬೇಕು.

ಅದಕ್ಕಾಗಿ ಕನ್ನಡಿಗರೆಲ್ಲರೂ ಕನ್ನಡದ ಬಗ್ಗೆ

ಅಭಿಮಾನಿಗಳಾಗಿ ಕನ್ನಡ ಉಳಿಸಿ ಬಳಸಿ ಬೆಳೆಸುವ

ಕಾರ್ಯದಲ್ಲಿ ತೊಡಗಬೇಕು.

‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ

ಎಲ್ಲರೂ ಎದ್ದೆದ್ದು ಓಡೋಡಿ ಬನ್ನಿ

ಕನ್ನಡದ ಗುಡಿಕಾಯೆ ನುಡಿಕಾಯ ಗಡಿಕಾಯೆ

ಕಾಯಲಾರನೆ ಸಾಯೇ, ಓ ಬೇಗ ಬನ್ನಿ’

 ಅರವತ್ತು ವರ್ಷಗಳ ಹಿಂದೆಯೇ ಕವಿ ಕಯ್ಯಾರ

ಕಿಞ್ಞಣ್ಣರೈ ಅವರು ನಮ್ಮನ್ನು ಎಚ್ಚರಿಸಿದ್ದನ್ನು ಮರೆತು

ನಾವು ನಿದ್ರೆಗೆ ಜಾರಿದ್ದೇವೆ.ಈಗಲಾದರೂ

ಎಚ್ಚೆತ್ತುಕೊಂಡು ಕನ್ನಡ ಕಟ್ಟುವ ಕೆಲಸ ಕೈ

ಯುದ್ಧೋಪಾದಿಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.

ಕನ್ನಡವನ್ನು ಅನ್ನದ ಭಾಷೆಯಾಗಿ,ಅರಿವಿನ

ಭಾಷೆಯಾಗಿ, ಹೃದಯದ ಭಾಷೆಯಾಗಿ ಬೆಳೆಸಲು ಕೈ

ಜೋಡಿಸಬೇಕು.

 ನನ್ನದು ನಾಡು ನನ್ನದು ನಾಡು ಎನ್ನದ ಮಾನವನೆದೆ

ಸುಡುಗಾಡು ಎಂದು ಮಹಾಕವಿ ಕುವೆಂಪೂರವರೂ

ಎಚ್ಚರಿಸುತ್ತಾರೆ.ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ

ಗರೀಯಸಿ ಎಂದು ವಾಲ್ಮೀಕಿ ಮಹರ್ಷಿಯು ರಾಮಾಯಣ

ದಲ್ಲಿ ಹೇಳುತ್ತಾರೆ.ತಾಯಿ ಮತ್ತು ಜನ್ಮಭೂಮಿ- ಇವು

ಸ್ವರ್ಗೀಯವಾದ ಸುಖ ಸಂತೋಷ ಕೊಡುವ ಸತ್

ಸಂಗತಿಗಳೂ ಆಗಿವೆ.ಆದ್ದರಿಂದ ಕನ್ನಡವೆಂಬುದು ಕನ್ನಡಾಂಬೆಯೂಆಗಿದೆ.ಕನ್ನಡ ನಾಡಿನ ಸಂಸ್ಕೃತಿ,ಸಾಹಿತ್ಯ,ಪರಂಪರೆ,ರಾಜಕಾರಣ,ರಾಜ್ಯಾಡಳಿತ, ಪ್ರಗತಿ ಸಂಗತಿಗಳಿಗೂ ಅನ್ವಯಿಸುತ್ತದೆ.ಅಂತೆಯೇ ನಾವೆಲ್ಲರೂ ಅಪ್ಪಟ ಕನ್ನಡಿಗರೇ

ಆಗಿ ಕನ್ನಡದ ಸಂರಕ್ಷಣೆಗೆ,ಪ್ರಗತಿಗೆ ಶ್ರಮಿಸಬೇಕಾಗಿದೆ.

 ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೇಳಿದ ಮಾತುಗಳ ನಮಗೆ ಆದರ್ಶವಾಗಬೇಕು

ಈಗ ಮಾಡಿರುವುದಕ್ಕಿಂತ ಹೆಚ್ಚಾದ ಕೆಲಸವನ್ನು ಮಾಡದೆ ಇರುವುದಕ್ಕೆ ವಿದ್ಯಾವಂತರಾದ ಕನ್ನಡಿಗರ

ಔದಾಸೀನ್ಯವೇ ಮುಖ್ಯ ಕಾರಣ … ನಮ್ಮ ಹೃದಯದಲ್ಲಿ ಕನ್ನಡಕ್ಕೆ ಸರಿಯಾದ ಸ್ಥಾನ ಇನ್ನೂ ದೊರೆತಿಲ್ಲ. ಹಿಂದೆ

ಸಂಸ್ಕೃತದಿಂದ, ಈಚೆಗೆ ಇಂಗ್ಲೀಷಿನಿಂದ ಕನ್ನಡವು ಕಡೆಗೆ ಬಿತ್ತು …. ನಮಗೆ ನಮ್ಮ ಭಾಷೆ ದೇವಭಾಷೆ ಎಂಬ ಮಮತೆ ಇರಬೇಕು … ನಮ್ಮ ನಾಡ ಜನರೆಲ್ಲ ಕನ್ನಡವನ್ನು ಚೆನ್ನಾಗಿ ಕಲಿಯಬೇಕು … ಕನ್ನಡವನ್ನು ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದೆನ್ನುವುದು ನಮ್ಮೆಲ್ಲರ ಕರ್ತವ್ಯ … ನಾವು ಕನ್ನಡ ಭಾಷೆಗೆ ವಿದ್ಯಾಭ್ಯಾಸದಲ್ಲಿ ಸರಿಯಾದ ಸ್ಥಾನವನ್ನು ಕಲ್ಪಿಸಬೇಕು … ವಿದ್ಯೆಯಿಂದ ಮನುಷ್ಯನಿಗೆ ಭಾವ ವಿಕಾಸವಾಗಬೇಕು. ಇದು ಮಾತೃಭಾಷೆಯಿಂದ ಆಗುವಂತೆ ಇನ್ನು ಯಾವ ಭಾಷೆಯಿಂದಲೂ ಆಗಲಾರದು … ಕನ್ನಡವೇ ನಮಗೆಲ್ಲ ಭಾಷೆ. ಅದನ್ನು ಬಿಟ್ಟರೆ ನಮಗೆ ಬರೆಯುವ ಭಾಷೆಯಿಲ್ಲ: ಅದನ್ನು ಬಿಟ್ಟರೆ

ನಮಗೆ ಓದುವ ಭಾಷೆಯಿಲ್ಲ ಎಂದು ನಿರ್ಧಾರ ಮಾಡಿ ಕನ್ನಡವನ್ನು ನಾವೆಲ್ಲ ಹಿರಿದಾಗಿ ಮಾಡಬೇಕು …..’

ಯಡೇಹಳ್ಳಿ ಆರ್ ಮಂಜುನಾಥ್.

RELATED ARTICLES
- Advertisment -spot_img

Most Popular