*ಅಬ್ಬಾ!! ಸ್ವಾಭಿಮಾನಿ ಕಿತ್ತೂರು ಚೆನ್ನಮ್ಮ.*
ಬ್ರಿಟಿಷರಿಗೆ ಸ್ವಾಭಿಮಾನ ಎಲ್ಲಕ್ಕೂ ಮಿಗಿಲೆಂಬುದನ್ನು ಅರಿವು ಮಾಡಿಕೊಟ್ಟಳು. ‘ ಸ್ವಾತಂತ್ರ್ಯ ಇಲ್ಲವೇ ಸ್ವರ್ಗ ʼಇದು ಚೆನ್ನಮ್ಮನ ಜೀವನ ಸಂದೇಶವಾಗಿತ್ತು. ವೀರ ಪರಂಪರೆಯ ಅಧಿದೇವತೆ ಕನ್ನಡ ಕುಲತಿಲಕ ಪ್ರಾಯಳಾದ ಚೆನ್ನಮ್ಮನ ಸ್ಮರಣೆ ಎಂದೆಂದಿಗೂ ಸ್ಫೂರ್ತಿದಾಯಕವಾಗಿದೆ.
ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕೆ ಇನ್ನೊಂದು ಹೆಸರಾಗಿರುವ ರಾಣಿ ಚೆನ್ನಮ್ಮಾಜಿಯ ಜೀವನವು ಸ್ವಾತಂತ್ರ್ಯ ಪ್ರಿಯರಿಗೆ ನಂದಾದೀವಿಗೆಯಾಗಿದೆ.
ದಯಾಮಯಿ, ತ್ಯಾಗಮೂರ್ತಿ, ಶೌರ್ಯದ ಸಾಕಾರ ಮೂರ್ತಿಯಾದ ರಾಣಿ ಚೆನ್ನಮ್ಮ ಎಲ್ಲಕಾಲಕ್ಕೂ ವೀರ ಪರಂಪರೆಯ ರತ್ನವೇ ಆಗಿದ್ದಾಳೆ.
ಸ್ವದೇಶಿ ತನಕ್ಕೆ ಅವಹೇಳನ ಎದುರಾಗುತ್ತಿರುವ ಇಂದಿನ ದಿನಮಾನಗಳಲ್ಲಿ ರಾಣಿ ಚೆನ್ನಮ್ಮಾಜಿಯ ಸ್ವಾತಂತ್ರ್ಯ ಮತ್ತು ತತ್ವಗಳು ಹೆಚ್ಚೆಚ್ಚು ಪ್ರಸಾರವಾಗುವ ಅಗತ್ಯವಿದೆ ಅಲ್ಲವೇ?
ಕನ್ನಡ ನಾಡಿನ ಹೆಮ್ಮೆಯ ಮಹಿಳೆ ರಾಣಿ ಚೆನ್ನಮ್ಮಳ ಅಗಾಧ ದೇಶಪ್ರೇಮವು ಎಲ್ಲರಿಗೂ ಮಾದರಿಯಾಗುವಂತಹುದು. ಆಕೆಯ ಜನ್ಮದಿನವಾದ ಇಂದು ಕನ್ನಡಿಗರಾದ ನಾವೆಲ್ಲರೂ ಅವಳ ಹೋರಾಟವನ್ನು ನೆನೆಯುತ್ತಾ ಅವಳಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ದೇಶದುದ್ದಗಲದ ಎಲ್ಲಾ ವೀರರ ತ್ಯಾಗ ಬಲಿದಾನಗಳನ್ನು ಸ್ಮರಿಸೋಣ. ಆ ಮುಖೇನ ಅವರ ಆದರ್ಶಮಯ ಬದುಕಿಗೆ ವಂದಿಸೋಣ.
ಹರ ಹರ ಮಹಾದೇವ
ಯಡೇಹಳ್ಳಿ”ಆರ್”ಮಂಜುನಾಥ್.