ಸಕಲೇಶಪುರ..ವಿಶ್ವ ಬಾಹ್ಯಾಕಾಶ ಸಾಪ್ತಾಹಿಕ ಕಾರ್ಯಕ್ರಮವು ಬಾಗೆ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಹಾಸನದ ಉಪಗ್ರಹ ನಿಯಂತ್ರಣ ಸೌಲಭ್ಯದ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಯಿತು
ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಿರಿಯ ವಿಜ್ಞಾನಿಗಳಾದ ಕಿರಣ್ ರವರು ಬಾಯಾಕಾಶ ಮತ್ತು ಸೌರ್ಯಂ ಸೌರಮಂಡಲ ಮತ್ತು ರಾಕೆಟ್ ಉಡಾವಣಾ ಬಗ್ಗೆ ಮಕ್ಕಳಿಗೆ ವಿಡಿಯೋ ಮತ್ತು ಆಡಿಯೋ ಮೂಲಕ ಮಾಹಿತಿ ನೀಡಿದರು ಮತ್ತು ಉಪಗ್ರಹ ರಾಕೆಟ್ಗಳ ಕಾರ್ಯಾಚರಣೆಯ ವಿವಿಧ ಹಂತಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
ಮಧ್ಯಾಹ್ನದ ವೇಳೆಯಲ್ಲಿ 8 9 ಮತ್ತು 10ನೇ ತರಗತಿಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸ್ಪರ್ಧೆಗಳಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಶಾಲೆಯ ಹೊರಾಂಗಣದಲ್ಲಿ ರಾಕೆಟ್ ಮಾದರಿಯನ್ನು ತಯಾರಿಸಿ ಮಕ್ಕಳಿಂದ ಉಡಾವಣೆ ಗೊಳಿಸಲಾಯಿತು . ಈ ಕಾರ್ಯಕ್ರಮದಲ್ಲಿ ಮಕ್ಕಳು ಬಹಳ ಕುತೂಹಲದಿಂದ ವಿಷಯವನ್ನು ಗ್ರಹಿಸಿದರು .
ಈ ಕಾರ್ಯಕ್ರಮದಲ್ಲಿ ಜೆಎಸ್ ಎಸ್ ಶಾಲೆಯ ಪ್ರಾಂಶುಪಾಲರಾದ ಮಧುಕುಮಾರ್ , ಶಾಲೆಯ ಶಿಕ್ಷಕ ರು ಉಪಗ್ರಹ ನಿಯಂತ್ರಣ ಸೌಲಭ್ಯದ ಹಿರಿಯ ಮತ್ತು ಕಿರಿಯ ವಿಜ್ಞಾನಿಗಳು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿದ್ದರು .