ಸಕಲೇಶಪುರ : ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಕಟ್ಟಡ ಕಾರ್ಮಿಕರ ಕಾರ್ಮಿಕರಿಗೆ ಶಾಲಾ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಯಿತು.
ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಕಟ್ಟಡ ಕಾರ್ಮಿಕರ ನೊಂದಾಯಿತ ಹಿರಿತನದ ಆಧಾರದ ಮೇಲೆ 1ರಿಂದ 5 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಸುಮಾರು 150 ಶಾಲಾ ವಿದ್ಯಾರ್ಥಿಗಳಿಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ಕಿಟ್ ವಿತರಣೆ ಮಾಡಿದರು.
5000 ರೂ ಗಳ ವೆಚ್ಚದ ಕಿಟ್ ನಲ್ಲಿ ನೋಟ್ ಬುಕ್, ಪೆನ್,ಪೆನ್ಸಿಲ್, ಟಿಫನ್ ಬಾಕ್ಸ್, ಶಟರ್, ಆಟಿಕೆಗಳು ಸೇರಿದಂತೆ ಹಲವಾರು ಸಾಮಗ್ರಿಗಳು ಇರುತ್ತವೆ.

ಈ ವೇಳೆ ಮಾತನಾಡಿದ ಶಾಸಕರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಿಟ್ ನೀಡುತ್ತಿದೆ. ಪೋಷಕರು ಸಮರ್ಪಕವಾಗಿ ಕಿಟ್ನಲ್ಲಿರುವ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ತಹಸೀಲ್ದಾರ್ ಮೇಘನಾ,ಕಾರ್ಮಿಕ ಇಲಾಖೆಯ ಮಂಗಳ ಗೌರಿ ಸೇರಿದಂತೆ ಮುಂತಾದವರಿದ್ದರು


                                    
