Monday, April 21, 2025
Homeಸುದ್ದಿಗಳುಸಕಲೇಶಪುರಪ್ರಾಮಾಣಿಕ ಹೋರಾಟಕ್ಕೆ ಸಂದ ಜಯ: ಮುಂದಿನ ದಿನಗಳಲ್ಲಿ ಭ್ರಷ್ಟಚಾರದ ವಿರುದ್ದ ಮತ್ತಷ್ಟು ಹೋರಾಟ: ಬಾಗೆ ಗ್ರಾ.ಪಂ...

ಪ್ರಾಮಾಣಿಕ ಹೋರಾಟಕ್ಕೆ ಸಂದ ಜಯ: ಮುಂದಿನ ದಿನಗಳಲ್ಲಿ ಭ್ರಷ್ಟಚಾರದ ವಿರುದ್ದ ಮತ್ತಷ್ಟು ಹೋರಾಟ: ಬಾಗೆ ಗ್ರಾ.ಪಂ ಸದಸ್ಯ ಬಾಗೆ ಚಾರ್ಲ್ಸ್

ಸಕಲೇಶಪುರ: ಪ್ರಾಮಾಣಿಕವಾಗಿ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಪಿಡಿಓ ಸಂಗಮೇಶ್ ಕರ್ತವ್ಯದಿಂದ ಅಮಾನತ್ತಾಗಲು ಕಾರಣವಾಗಿದೆ ಎಂದು ಬಾಗೆ ಚಾರ್ಲ್ಸ್ ಹೇಳಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಅಧಿಕಾರಿ ವಲಯ ವ್ಯಾಪಕ ಭ್ರಷ್ಟಚಾರವೆಸಗುತ್ತಿದ್ದು ಇದರಿಂದ ಬಡಜನರಿಗೆ ಅನ್ಯಾಯವಾಗುತ್ತಿದೆ. ಬಹುತೇಕ ಯೋಜನೆಗಳು ಉಳ್ಳವರ ಪಾಲಾಗುತ್ತಿದೆ. ಈ ನಿಟ್ಟಿನಲ್ಲಿ ಬಾಗೆ ಗ್ರಾ.ಪಂ ವ್ಯಾಪ್ತಿಯ ಪಿಡಿಓ ಸಂಗಮೇಶ್ ತಮ್ಮ ಪತ್ನಿಯ ಹೆಸರಿನಲ್ಲಿ ನಿವೇಶನ ಪಡೆದಿರುವುದರ ಕುರಿತು ದಾಖಲಾತಿ ಸಮೇತ ಸುದ್ದಿಗೋಷ್ಠಿ ಮಾಡಿದ ಹಿನ್ನಲೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು ಪಿಡಿಓ ಸಂಗಮೇಶ್ ರವರನ್ನು ಕರ್ತವ್ಯದಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂತರಾಜುರವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಿಡಿಓ ಸಂಗಮೇಶ್ ರೀತಿಯಲ್ಲೆ ಇನ್ನು ಕೆಲವು ಪಿಡಿಓಗಳು ಅಕ್ರಮವಾಗಿ ನಿವೇಶನ ಪಡೆದಿದ್ದು ಅವರ ಅಕ್ರಮಗಳನ್ನು ಹೊರತರುವೆ ಹಾಗೂ ತಾಲೂಕಿನಲ್ಲಿ ಅಧಿಕಾರಿಗಳು ಯಾರಾದರು ಅಕ್ರಮಗಳುವೆಸುಗುವುದು ಕಂಡು ಬಂದಲ್ಲಿ ಅಂತಹವರ ವಿರುದ್ದ ದಾಖಲೆ ಸಹಿತ ಹೋರಾಟ ಮಾಡಲಾಗುವುದು ಎಂದಿದ್ದಾರೆ.

RELATED ARTICLES
- Advertisment -spot_img

Most Popular