ಸಕಲೇಶಪುರ: ಪಟ್ಟಣದ ಸಮೀಪವಿರುವ ಕೌಡಹಳ್ಳಿ ಸುತ್ತಮುತ್ತ ಸೀಮಿತವಾಗಿದ್ದ ಕಾಡಾನೆಗಳ ಕಾಟ ಇದೀಗ ಪಟ್ಟಣ ವ್ಯಾಪ್ತಿಯ ವಾರ್ಡ್ ನಂಬರ್ 23 ಕುಡುಗರಹಳ್ಳಿ ಬಡಾವಣೆಗೆ ಸಹ ವ್ಯಾಪಿಸಿದ್ದು ಜನರಲ್ಲಿ ಆತಂಕ ಉಂಟುಮಾಡಿದೆ. ಒಂದು ಕಾಡಾನೆ ಹಾಗೂ ಮತ್ತೊಂದು ಮರಿಯಾನೆ ಕುಡಗರಹಳ್ಳಿ ಬಡಾವಣೆಯ ವಿವಿಧೆಡೆ ಶನಿವಾರ ಬೆಳಗಿನ ಜಾವ ಸಂಚರಿಸಿದ್ದು ಬೋಜೇಗೌಡ ಎಂಬವರ ಕಾಫಿ ತೋಟದಲ್ಲಿ ಅಪಾರ ಪ್ರಮಾಣದ ಬಿದಿರು,ಬಾಳೆ ಹಾಗೂ ಕಾಫಿ ಗಿಡಗಳನ್ನು ನಾಶ ಪಡಿಸಿವೆ ಅಲ್ಲದೆ ಗಿಡಗಳಿಗೆ ಔಷಧಿ ಹೊಡೆಯಲು ಇಟ್ಟಿದ್ದ ಪ್ಲಾಸ್ಟಿಕ್ ಡ್ರಮ್ ವೊಂದನ್ನು ಸಹ ನಾಶಪಡಿಸಿವೆ.
.ಕಳೆದ ಕೆಲವು ದಿನಗಳ ಹಿಂದಷ್ಟೇ ಪಟ್ಟಣದ ಸದಾಶಿವನಗರ ಬಡಾವಣೆಯಲ್ಲಿ ಕಾಡಾನೆಯೊಂದು ಸಂಚರಿಸಿದ್ದು ಜನರಲ್ಲಿ ಆತಂಕ ಉಂಟು ಮಾಡಿತ್ತು. ಕಾಡಾನೆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದರಿಂದ ಅಲ್ಲಿ ಕಾಡಾನೆಗಳು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸುವುದರಲ್ಲಿ ಅನುಮಾನವಿಲ್ಲದಂತಾಗಿದೆ. ಎಂಬವರ ಕಾಫಿ ತೋಟದಲ್ಲಿ ಅಪಾರ ಪ್ರಮಾಣದ ಬಿದಿರು,ಬಾಳೆ ಹಾಗೂ ಕಾಫಿ ಗಿಡಗಳನ್ನು ನಾಶ ಪಡಿಸಿವೆ ಅಲ್ಲದೆ ಗಿಡಗಳಿಗೆ ಔಷಧಿ ಹೊಡೆಯಲು ಇಟ್ಟಿದ್ದ ಪ್ಲಾಸ್ಟಿಕ್ ಡ್ರಮ್ ವೊಂದನ್ನು ಸಹ ನಾಶಪಡಿಸಿವೆ.ಕಳೆದ ಕೆಲವು ದಿನಗಳ ಹಿಂದಷ್ಟೇ ಪಟ್ಟಣದ ಸದಾಶಿವನಗರ ಬಡಾವಣೆಯಲ್ಲಿ ಕಾಡಾನೆಯೊಂದು ಸಂಚರಿಸಿದ್ದು ಜನರಲ್ಲಿ ಆತಂಕ ಉಂಟು ಮಾಡಿತ್ತು. ಕಾಡಾನೆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವುದರಿಂದ ಅಲ್ಲಿ ಕಾಡಾನೆಗಳು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸುವುದರಲ್ಲಿ ಅನುಮಾನವಿಲ್ಲದಂತಾಗಿದೆ.