ಸಕಲೇಶಪುರ : ಕಾಫಿ ಹಣ್ಣು ಬಿಡಿಸುವ ಕಾಯಕದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರನ್ನು ಕಾಡಾನೆಯೊಂದು ಬೆನ್ನಟ್ಟಿದ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪದ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಆಕ್ರೋಷ ಭರಿತಗೊಂಡಿರುವ ಕಾಡಾನೆಯೂ ಮುಂಜಾನೆಯಿಂದ ಬಾಳ್ಳುಪೇಟೆ, ಜೆಪಿ ನಗರ ಚಿಕ್ಕನಾಯಕನಹಳ್ಳಿ, ನಿಡನೂರು ಗ್ರಾಮದ ಸುತ್ತಮುತ್ತ ಓಡಾಡುತ್ತಿತ್ತು.
ಈ ಸಮಯದಲ್ಲಿ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸದಲ್ಲಿ ಮಗ್ನರಾಗಿದ್ದ ಕೂಲಿ ಕಾರ್ಮಿಕರು ಏಕಾಏಕಿ ತೋಟಕ್ಕೆ ನುಗ್ಗಿದ ಕಾಡಾನೆ ಕಂಡು ಕಾಫಿ ಹಣ್ಣಿನ ಚೀಲದೊಂದಿಗೆ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ತಕ್ಷಣವೇ ಎಚ್ಚೆತ್ತ ಅರಣ್ಯ ಇಲಾಖೆ ಆರ್ ಆರ್.ಟಿ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಕಾಡಾನೆಯನ್ನು ಹಿಂಬಾಲಿಸುವಂತೆ ಸೂಚನೆ ನೀಡಿದ್ದಾರೆ.
ಮುಂಜಾನೆಯ ಈ ರೀತಿ ಕಾಡಾನೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಓಡಾಡುವ ಸಮಯವಾದ್ದರಿಂದ ಅರಣ್ಯ ಇಲಾಖೆ ಈ ಸಮಯದಲ್ಲಿ ಸೂಕ್ತವಾದ ಭದ್ರತೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.