ಪತ್ನಿಯನ್ನ ರಸ್ತೆಯಲ್ಲಿ ಅಟ್ಟಾಡಿಸಿ ಕತ್ತಿಯಿಂದ ಹಲ್ಲೆ ಮಾಡಿದ ಪಾಪಿ ಪತಿ
ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆ ಎದುರೇ ಪತ್ನಿ ಮೇಲೆ ಪತಿಯೋರ್ವ ಕತ್ತಿಯಿಂದ ಹಲ್ಲೆ ಮಾಡಿ ಕೊಲೆ ಯತ್ನ ಮಾಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ತಿರುಮಲಾಪುರದಲ್ಲಿ ನಡೆದಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕಲೆಧ ಎರಡು ವರ್ಷಗಳಿಂದ ಪತಿ ಪತ್ನಿ ದೂರವಿದ್ದು ಆಸ್ತಿ ಭಾಗಕ್ಕಾಗಿ ಪತಿ ಶ್ರೀನಿವಾಸ್ ವಿರುದ್ಧ ಪತ್ನಿ ಸವಿತಾ ಕೇಸ್ ದಾಖಲಿಸಿ ಕಾನೂನು ಹೋರಾಟ ಮಾಡುತ್ತಿದ್ದರು. ಇದೇ ವಿಚಾರದಲ್ಲಿ ಶ್ರೀನಿವಾಸ ನೆನ್ನೆ ಸಂಜೆ ಜಗಳ ತೆಗೆದು ಪತ್ನಿ ಮೇಲೆ ಅಟ್ಯಾಕ್ ಮಾಡಿದ್ದು ತಪ್ಪಿಸಿಕೊಂಡು ಓಡಿದರೂ ಬಿಡದೆ ಅಮಾನುಷ ವಾಗಿ ಹಲ್ಲೆ ಮಾಡಿದ್ದಾನೆ.ಸವಿತಾ ಸಹೋದರಿ ಅನಿತಾ ಕಾರನ್ನು ಸಹ ಶ್ರೀನಿವಾಸ ಕತ್ತಿಯಿಂದ ಧ್ವಂಸ ಮಾಡಿದ್ದಾನೆ. ಗಾಯಾಳು ಪತ್ನಿ ಸವಿತಾ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಆರೋಪಿ ಪತಿ ಶ್ರೀನಿವಾಸ ಬಂಧನಕ್ಕೆ ಪೋಲಿಸರು ವ್ಯಾಪಕ ಶೋಧ ನಡೆಸಿದ್ದಾರೆ. ಪತ್ನಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡೋ ವೀಡಿಯೋ ಕೆಲವರು ಮೊಬೈಲ್ ನಲ್ಲಿ ಸೆರೆ ಮಾಡಿರುವುದು ವೈರಲ್ ಆಗಿದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.