Monday, April 21, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ತಾಲ್ಲೂಕು ಪಂಚಾಯಿತಿಯಿಂದ ವೀಲ್‌ಚೇರ್ ವಿತರಣೆ

ಸಕಲೇಶಪುರ : ತಾಲ್ಲೂಕು ಪಂಚಾಯಿತಿಯಿಂದ ವೀಲ್‌ಚೇರ್ ವಿತರಣೆ

ಸಕಲೇಶಪುರ :  ಸೌಲಭ್ಯ ವಂಚಿತ ವಿಕಲಾಂಗರನ್ನು ಗುರುತಿಸಿ ಅವರಿಗೆ ನಡೆದಾಡಲು ವೀಲ್ ಚೇರ್‌ನ್ನು ತಾಲ್ಲೂಕು ಪಂಚಾಯಿತಿವತಿಯಿಂದ ದೊರಕಿಸಿ ಕೊಡುವ ಮೂಲಕ ಗ್ರಾಪಂ ಸದಸ್ಯ ನಂದು ಗೌಡ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

74 ನೆ ಗಣರಾಜ್ಯೋತ್ಸವದಂದು ಐಗೂರು ಗ್ರಾಮ ಪಂಚಾಯಿತಿಯ ಯಡಕೆರೆ ಗ್ರಾಮದಲ್ಲಿ  ತಾಲ್ಲೂಕು ಪಂಚಾಯಿತಿ ವತಿಯಿಂದ ನೀಡಲಾದ ವೀಲ್ ಚೇರ್ ವಿತರಿಸಿ ಮಾತನಾಡಿದ ಅವರು, ಸರಕಾರವು ವಿಕಲಚೇತನರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೂಳಿಸಿದ್ದು, ಅವರಿಗೆ ಅವಶ್ಯಕತೆಗೆ ತಕ್ಕಂತೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಅವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯತೆ ಇದ್ದು, ನಮ್ಮ ಸುತ್ತ ಮುತ್ತಲಿನ ವಿಕಲಚೇತನರನ್ನು ಗುರುತಿಸಿ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಪ್ರಾಮಾಣಿಕ ಪ್ರಯತ್ನದಿಂದ   ದೊರಕಿಸಿ ಕೊಡುವ ಕೆಲಸ ಎಲ್ಲರೂ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ HDPA ನಿರ್ದೇಶಕ  ಗಂಗಾಧರ್ K.B,
ವಿಕಲಚೇತನರ ಸಂಘದ ಕುಮಾರಸ್ವಾಮಿ, ವೈ.ಸಿ. ಪುಟ್ಟಸ್ವಾಮಿ ಗೌಡ್ರು, ತಮ್ಮೆ ಗೌಡ್ರು, SDMC ಶಿವಕುಮಾರ್ ,ವೆಂಕಟೇಶ್ ,ಶಿಕ್ಷಕರಾದ ಪರಮೇಶ್ ಮುಂತಾದವರು ಉಪಸ್ಥಿತರಿದ್ದರು.
RELATED ARTICLES
- Advertisment -spot_img

Most Popular